ಮಂಜೇಶ್ವರ: ದೇಶದಲ್ಲೇ ಪ್ರಥಮ ಬಾರಿಗೆ ಕೇರಳ ರಾಜ್ಯವನ್ನು ಕಡುಬಡತನ ಮುಕ್ತ ರಾಜ್ಯವಾಗಿ ರಾಜ್ಯ ಸರಕಾರ ಘೋಷಿಸಿದ ಸಂಭ್ರಮಾಚರಣೆಯ ಭಾಗವಾಗಿ ಮೀಂಜ ಚಿಗುರುಪಾದೆ ವಾರ್ಡ್ ಮಟ್ಟದ ಕಾರ್ಯಕ್ರಮ ನಡೆಯಿತು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ಮೀಂಜ_ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ರಾಮಚಂದ್ರ ಟಿ. ಉಪಸ್ಥಿತರಿದ್ದರು. ಉದಯ ಸಿ.ಎಚ್. ಸ್ವಾಗತಿಸಿದರು.







