ತೃಶೂರು: ೨೦೨೪ನೇ ಸಾಲಿನ ರಾಜ್ಯ ಚಲನಚಿತ್ರ ಪುರಸ್ಕಾರವನ್ನು ರಾಜ್ಯ ಸಾಂಸ್ಕೃತಿಕ ಖಾತೆ ಸಚಿವ ಸಜಿ ಚೆರಿಯನ್ ನಿನ್ನೆ ಘೋಷಿಸಿದ್ದಾರೆ. ‘ಭ್ರಮಯುಗಂ’ ಚಿತ್ರದ ಅಭಿನಯಕ್ಕಾಗಿ ಮಮ್ಮುಟ್ಟಿ ಅತ್ಯುತ್ತಮ ನಟ ಹಾಗೂ ‘ಫೆಮಿನಿಚ್ಚಿ ಫಾತಿಮಾ’ ಎಂಬ ಚಿತ್ರದ ಅಭಿನಯಕ್ಕಾಗಿ ಶಮ್ಲಾ ಹಂಸ ಅತ್ಯುತ್ತಮ ನಟಿ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ. ಮಮ್ಮುಟ್ಟಿಗೆ ರಾಜ್ಯ ಚಲನಚಿತ್ರ ಪುರಸ್ಕಾರ ಲಭಿಸಿರುವುದು ಇದು ಎಂಟನೇ ಬಾರಿಯಾಗಿದೆ.
‘ಮಂಞ್ಞಮ್ಮಲ್ ಬೋಸ್ಸ್’ ಚಿತ್ರದ ನಿರ್ದೇಶಕ ಚಿದಂಬರಂರನ್ನು ಅತ್ಯುತ್ತಮ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಚಿತ್ರ ಸೇರಿದಂತೆ ಈ ಚಿತ್ರ ಒಟ್ಟು 10 ಪುರಸ್ಕಾರಗಳನ್ನು ಬಾಚಿಕೊಂಡಿದೆ. ‘ನಡನ್ನ ಸಂಭವಂ’ ಅಭಿನಯಕ್ಕಾಗಿ ರಿಜೋಮೋಳ್, ‘ಮಂಞ್ಞಮ್ಮಲ್ ಬೋಸ್ಸ್’ ಅಭಿನಯಕ್ಕಾಗಿ ನೌಬಿನ್, ಭ್ರಮಯುಗಂ ಚಿತ್ರದ ಅಭಿನಯಕ್ಕಾಗಿ ಸಿದ್ಧಾರ್ಥ ಭರತನ್‌ರನ್ನು ಅನುಕ್ರಮವಾಗಿ ಅತ್ಯುತ್ತಮ ನಟನಟಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಇದರ ಹೊರತಾಗಿ ನಟ ಅಸೀಫ್ ಆಲಿ (ಕಿಷ್ಕಿಂದ ಕಾಡಂ) ಟೋಮಿನೊ ಥೋಮಸ್ (ಎ.ಆರ್.ಎಂ) ಜ್ಯೋತಿರ್ಮಯಿ (ಬೋಗ್ಯನ್ ವಿಲ್ಲಾ) ಮತ್ತು ದರ್ಶನ ರಾಜೇಂದ್ರನ್ (ಪಾರಡೈಸ್) ಎಂಬವರು ವಿಶೇಷ ಜ್ಯೂರಿ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ. ‘ಪ್ರೇಮುಲು’ ಅತ್ಯುತ್ತಮ ಮನರಂಜನಾ ಚಿತ್ರಕ್ಕೆ ಅರ್ಹವಾಗಿದೆ. ಫೆಮಿನಿಸ್ಟ್ ಫಾತಿಮಾ ಅತ್ಯುತ್ತಮ ದ್ವಿತೀಯ ಸಿನೆಮಾಕ್ಕೆ ಪುರಸ್ಕಾರವೂ ಲಭಿಸಿದೆ. ಅತ್ಯುತ್ತಮ ಗಾಯಕ ಪುರಸ್ಕಾರ ಕೆ.ಎಸ್. ಹರಿಶಂಕರನ್ ಮತ್ತು ಅತ್ಯುತ್ತಮ ಗಾಯಕಿ ಪುರಸ್ಕಾರಕ್ಕೆ ಸೈಬಾ ಟೋಮಿ ಅರ್ಹರಾಗಿದ್ದಾರೆ. ನಟ ಪ್ರಕಾಶ್ ರಾಜ್ ಅಧ್ಯಕ್ಷರಾಗಿರುವ ಜ್ಯೂರಿಗೆ ಆಯ್ಕೆ ನಡೆಸಿದೆ







