ತಿರುವನಂತಪುರ: ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಹೊಸ ಅತೀ ನಿರ್ಣಾಯಕ ಮಾಹಿತಿಗಳು ಈಗ ಹೊರಬಿದ್ದಿವೆ. ಚಿನ್ನದ ಲೇಪನಕ್ಕಾಗಿ ಉಣ್ಣಿಕೃಷ್ಣನ್ ಪೋತ್ತಿ ಶಬರಿಮಲೆ ದೇಗುಲದಿಂದ ಸಾಗಿಸಲಾಗಿದ್ದ ದ್ವಾರಪಾಲಕ ಮೂರ್ತಿಗಳ ಕವಚಗಳು ಕೇವಲ ತಾಮ್ರದ್ದಾಗಿತ್ತು ಎಂದು 2024ರಲ್ಲಿ ತಿರುವಿದಾಂ ಕೂರು ಮುಜರಾಯಿ ಮಂಡಳಿ ಕಾರ್ಯದರ್ಶಿಯವರು ಹೊರ ತಂದ ದಾಖಲುಪತ್ರಗಳಲ್ಲಿ ಸ್ಪಷ್ಟಪಡಿ ಸಿದ್ದಾರೆ. ಇದರಿಂದಾಗಿ ಶಬರಿಮಲೆ ಕ್ಷೇತ್ರದ 2019ರ ಅವಧಿಯ ಪದಾಧಿಕಾರಿಗಳು ಈ ಪ್ರಕರಣದಲ್ಲಿ ಸಿಲುಕುವ ಸಾಧ್ಯತೆ ಇದೆ.
ದ್ವಾರಪಾಲಕ ಮೂರ್ತಿಗಳ ಕವಚಗಳನ್ನು ಚಿನ್ನದ ಲೇಪನ ಗೊಳಿಸಲು ಅದನ್ನು ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಗೆ ಹಸ್ತಾಂ ತರಿಸಲಾಗಿತ್ತು. ಅದು ತಾಮ್ರದ ಕವಚಗಳಾಗಿವೆಯೆಂದು 2024ರಲ್ಲಿ ಮಂಡಳಿ ಕಾರ್ಯದರ್ಶಿ ತಯಾ ರಿಸಿದ ದಾಖಲುಪತ್ರಗಳಲ್ಲಿ ಸ್ಪಷ್ಟಪಡಿಸಲಾಗಿತ್ತು ಮಾತ್ರವಲ್ಲದೆ ಅದರಲ್ಲಿ ಚಿನ್ನದ ಬಗ್ಗೆ ಯಾವುದೇ ಉಲ್ಲೇಖ ನಡೆಸಲಾಗಿಲ್ಲ. 2019 ಮೇ 18ರಂದು ಈ ಕವಚಗಳನ್ನು ಚಿನ್ನದ ಲೇಪನಕ್ಕಾಗಿ ಕಳುಹಿಸಿ ಕೊಡಲಾಗಿತ್ತು. ೨೦೧೯ ನವಂಬರ್ ತಿಂಗಳ ತನಕ ಸಿಪಿಎಂ ಪತ್ತನಂತಿಟ್ಟ ಜಿಲ್ಲಾ ಸಮಿತಿ ಸದಸ್ಯ ಎ. ಪದ್ಮಕುಮಾರ್ ಮಂಡಳಿಯ ಅಧ್ಯಕ್ಷರಾಗಿದ್ದರು. ಶಂಕರ್ ದಾಸ್ ಮತ್ತು ಎನ್. ವಿಜಯ ಕುಮಾರ್ ಮಂಡಳಿಯ ಇತರ ಸದಸ್ಯರಾಗಿದ್ದರು. ೨೦೨೪ರ ವರದಿಯ ಆಧಾರದಲ್ಲಿ ಅವರೂ ಈ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.







