ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ: ಹಳೆ ವಿದ್ಯಾರ್ಥಿ ಸಂಘದಿಂದ ಸ್ಮರಣಿಕೆ, ಟ್ರೋಫಿ ಹಸ್ತಾಂತರ

ಕಾಸರಗೋಡು: ಕಾಸರಗೋಡು ಜಿಎಚ್‌ಎಸ್‌ಎಸ್‌ನಲ್ಲಿ ನಡೆಯುತ್ತಿರುವ ಉಪಜಿಲ್ಲಾ ಕೇರಳ ಶಾಲಾ ಕಲೋತ್ಸವದ ವಿಜೇತರಿಗಿರುವ ಸ್ಮರಣಿಕೆ ಹಾಗೂ ಟ್ರೋಫಿಗಳನ್ನು ಶಾಲೆಯ ಪೂರ್ವ ವಿದ್ಯಾರ್ಥಿ ಸಂಘಟನೆ ಹಸ್ತಾಂತರಿಸಿದೆ. ಸ್ಪರ್ಧಾ ವಿಜೇತರಾದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ, ಜನರಲ್ ವಿಭಾಗದಲ್ಲೂ ಅರೆಬಿಕ್, ಸಂಸ್ಕೃತ ಕಲೋತ್ಸವ ಚಾಂಪ್ಯನ್‌ರಿಗಿರುವ ರೋಲಿಂಗ್ ಟ್ರೋಫಿಯನ್ನು ಹಳೆ ವಿದ್ಯಾರ್ಥಿ ಸಂಘಟನೆ ಕೊಡುಗೆಯಾಗಿ ನೀಡಿದೆ. ಜನರಲ್ ವಿಭಾಗದ ರೋಲಿಂಗ್ ಟ್ರೋಫಿಯನ್ನು ಸಂಘಟನೆಯ ಅಧ್ಯಕ್ಷ, ನಗರಸಭಾಧ್ಯಕ್ಷನಾಗಿದ್ದ ಟಿ.ಇ. ಅಬ್ದುಲ್ಲರ ಸ್ಮರಣೆಗಾಗಿ ನೀಡಲಾಗುತ್ತಿದೆ. ಸಂಘಟನೆಯ ಅಧ್ಯಕ್ಷ ಕೆ. ಜಯಪ್ರಕಾಶ್, ಸ್ವಾಗತ ಸಮಿತಿ ಸಂಚಾಲಕ, ಪ್ರಾಂಶುಪಾಲ ಪಿ.ಕೆ. ಸುನಿಲ್‌ರಿಗೆ ಟ್ರೋಫಿಗಳನ್ನು ಹಸ್ತಾಂತರಿಸಿದರು. ಕಾರ್ಯದರ್ಶಿ ಶಾಫಿ ಎ. ನೆಲ್ಲಿಕುನ್ನು, ಕೋಶಾಧಿಕಾರಿ ಸಿ.ಕೆ. ಅಬ್ದುಲ್ಲ ಚೆರ್ಕಳ, ಚರಿಷ್ಮ ಟೀಚರ್, ಶಾಫಿ ಪಾರೆಕಟ್ಟೆ, ಶರೀಫ್ ತಂಗಯ, ಹಾರಿಸ್ ಪೂರಣಂ, ಅಬ್ದುಲ್ ಶುಕೂರ್, ವಿಜಯಚಂದ್ರನ್ ಸಹಿತ ಹಲವರು ಭಾಗವಹಿಸಿದರು.

You cannot copy contents of this page