ಶಬರಿಮಲೆ: ಸೇವೆ, ಕೊಠಡಿ ಬುಕ್ಕಿಂಗ್ ಇಂದಿನಿಂದ

ಶಬರಿಮಲೆ: ಮಂಡಲ, ಮಕರ ಜ್ಯೋತಿ ತೀರ್ಥಾಟನೆ ಕಾಲದಲ್ಲಿ ಸನ್ನಿಧಾನದಲ್ಲಿ ಸೇವೆಗಳು ಹಾಗೂ ವಾಸಿಸಲು ಕೊಠಡಿಗಳ ಬುಕ್ಕಿಂಗ್ ಇಂದಿನಿಂದ ಆನ್‌ಲೈನ್ ಮೂಲಕ ಆರಂಭಗೊಂಡಿದೆ.  www.onlinetoldb.com ಮೂಲಕ ಬುಕ್ಕಿಂಗ್ ನಡೆಸಬೇಕಾಗಿದೆ. ಉದಯಾ ಸ್ತಮಾನ ಪೂಜೆ, ಮೆಟ್ಟಿಲುಪೂಜೆ, ಸಹಸ್ರ ಕಲಶ, ಕಳಬಾಭಿಷೇಕ, ಉಷಪೂಜೆ, ಮಧ್ಯಾಹ್ನಪೂಜೆ, ರಾತ್ರಿಪೂಜೆ, ತುಪ್ಪಾಭಿಷೇಕ ಮೊದಲಾದ ಸೇವೆಗಳನ್ನು ದರ್ಶನಕ್ಕಿರುವ ವರ್ಚುವಲ್ ಕ್ಯೂ ಜೊತೆ ಬುಕ್ಕಿಂಗ್ ನಡೆಸಬಹುದು. 5 ವರ್ಷಕ್ಕಿಂತ ಕೆಳಪ್ರಾಯದವರಿಗೆ ಬುಕ್ಕಿಂಗ್ ಅಗತ್ಯವಿಲ್ಲ. ವರ್ಚುವಲ್ ಕ್ಯೂ ಬುಕ್ಕಿಂಗ್ https://sabarimalaonline.org ಎಂಬ ವೆಬ್‌ಸೈಟ್ ಮೂಲಕ ನಡೆಸಬೇಕಾಗಿದೆ.

You cannot copy contents of this page