10ನೇ ತರಗತಿ ತತ್ಸಮಾನ ಪರೀಕ್ಷೆ ನ.8ರಿಂದ

ಕಾಸರಗೋಡು: 10ನೇ ತರಗತಿ ತತ್ಸಮಾನ ಪರೀಕ್ಷೆ ಈ ತಿಂಗಳ 8ರಿಂದ ಆರಂಭಗೊಳ್ಳಲಿದೆ. 420 ಮಂದಿ ಪರೀಕ್ಷೆ ಬರೆಯುವರು. ಸಾರ್ವತ್ರಿಕ ಶಿಕ್ಷಣ ಇಲಾಖೆ ಸಾಕ್ಷರತಾ ಮಿಷನ್ ಮೂಲಕ ನಡೆಸುವ 10ನೇ ತರಗತಿ ತತ್ಸಮಾನದ 18ನೇ ಬ್ಯಾಚ್ನ ಪರೀಕ್ಷೆ ನವೆಂಬರ್ 18ರವರೆಗೆ ಜಿಲ್ಲೆಯ 8 ಶಾಲೆಗಳಲ್ಲಿ ನಡೆಯಲಿದೆ. 109 ಮಂದಿ ಕನ್ನಡ ಮಾಧ್ಯಮದಲ್ಲಿದ್ದಾರೆ.
ವೆಸ್ಟ್ ಎಳೇರಿ ಪಂಚಾಯತ್ನ 68ರ ತಂಬಾಯಿ, ಕುಂಬಳೆಯ 67ರ ರಾಮಕೃಷ್ಣನ್, ತೃಕರಿಪುರದ 64ರ ರಾಮಚಂದ್ರನ್, ಹೊಸದುರ್ಗದ 62ರ ಸರಸ್ವತಿ ಈ ಬ್ಯಾಚ್ನಲ್ಲಿ ಅತ್ಯಂತ ಹೆಚ್ಚು ಪ್ರಾಯದ ಕಲಿಕೆದಾರರಾಗಿದ್ದಾರೆ. ಪೈವಳಿಕೆಯ 18ರ ಹರೆಯದ ಮುಹಮ್ಮದ್ ಮಶೂದ್ ಅತ್ಯಂತ ಪ್ರಾಯ ಕಡಿಮೆಯ ಕಲಿಕೆದಾರ. ಪರಿಶಿಷ್ಟ ಜಾತಿ ವಿಭಾಗದಲ್ಲಿ ಸೇರಿದ 19 ಮಂದಿ, ಪರಿಶಿಷ್ಟ ಪಂಗಡದಲ್ಲಿ ಸೇರಿದ 15 ಮಂದಿ, ಭಿನ್ನ ಸಾಮರ್ಥ್ಯದ ಮೂರು ಮಂದಿ ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 136 ಪುರುಷರು, 284 ಮಹಿಳೆಯರು ಸೇರಿದ್ದಾರೆ.

You cannot copy contents of this page