ಕುಂಬಳೆ: ಅನಂತಪುರದಲ್ಲಿ ಕ್ಲೀನ್ ಕೇರಳ ಕಂಪೆನಿ ಲಿಮಿಟೆಡ್ನ ಗ್ರೀನ್ ಪಾರ್ಕ್ನ್ನು ಸ್ಥಳೀಯಾಡಳಿತ, ಅಬಕಾರಿ ಇಲಾಖೆ ಸಚಿವ ಎಂ.ಬಿ. ರಾಜೇಶ್ ಆನ್ಲೈನ್ ಆಗಿ ಉದ್ಘಾಟಿಸಿದರು. ನಾಡಿನ ಶುಚಿತ್ವ ಚಟುವಟಿಕೆಗಳಲ್ಲಿ ಹಸಿರು ಕ್ರಿಯಾ ಸೇನೆ ವಹಿಸುತ್ತಿರುವ ಪಾತ್ರ ಬಹಳ ದೊಡ್ಡದು ಎಂದು ಸಚಿವರು ನುಡಿದರು. ಹಸಿರು ಕ್ರಿಯಾ ಸೇನೆಯ ಚಟುವಟಿಕೆಗಳನ್ನು ಪೂರ್ಣತೆಯಲ್ಲಿ ಕೊಂಡೊಯ್ಯಲು ಕ್ಲೀನ್ ಕೇರಳ ಕಂಪೆನಿ ಪರ್ಯಾಪ್ತವೆಂದು ಸಚಿವರು ನುಡಿದರು.
ಹಸಿರು ಕ್ರಿಯಾಸೇನೆಯ ಸಹಾಯ ದೊಂದಿಗೆ ಕ್ಲೀನ್ ಕೇರಳ ಕಂಪೆನಿ ಜಿಲ್ಲೆಯಲ್ಲಿ ಪ್ರತೀ ತಿಂಗಳು ಸಂಗ್ರಹಿಸುವ 400 ಟನ್ ಪಾಳು ಸಾಮಗ್ರಿಗಳಲ್ಲಿ 100 ಟನ್ ಮಾತ್ರವೇ ವಿಂಗಡಿಸಲ್ಪಡು ತ್ತಿದೆ. ಉಳಿದವುಗಳನ್ನು ಫಲಪ್ರದವಾಗಿ ವಿಂಗಡಿಸಲು ಈ ಪ್ಲಾಂಟ್ ಸಹಕಾರವಾ ಗಲಿದೆ ಎಂದು ಅವರು ನುಡಿದರು.
ಎಲ್ಲಾ ವಲಯದಲ್ಲೂ ನಂಬರ್ ವನ್ ಆಗಿರುವ ಕೇರಳ ಶುಚಿತ್ವ ವಲಯದಲ್ಲೂ ಕಲಿಯಲು ಹಾಗೂ ತಿಳಿದುಕೊಳ್ಳಲು ಅನ್ಯರಾಜ್ಯಗಳಿಂದ ಇಲ್ಲಿಗೆ ತಲುಪುವ ಕಾಲ ಸನಿಹದಲ್ಲಿದೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಸಕ ಎಕೆಎಂ ಅಶ್ರಫ್ ನುಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ, ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಜಿ.ಪಂ. ಸದಸ್ಯ ನಾರಾಯಣ ನಾಯ್ಕ್, ಎಂ. ಚಂದ್ರಾವತಿ, ಖಾಲಿದ್ ಪಚ್ಚಕ್ಕಾಡ್, ಆರ್. ಶೈನಿ, ಪಿ. ಜಯನ್, ಪಿ.ಬಿ. ಶ್ರೀಲಕ್ಷ್ಮಿ, ಎಚ್. ಕೃಷ್ಣ ಸಹಿತ ಹಲವರು ಭಾಗವಹಿಸಿದರು.







