ಬೆಳ್ಳೂರು: ಇಲ್ಲಿಗೆ ಸಮೀಪದ ಬೆಳೇರಿ ನಿವಾಸಿ, ಭಾರತೀಯ ಸೇನೆ ಯಲ್ಲಿ ಹವೀಲ್ದಾರ್ ಆಗಿ ನಿವೃತ್ತರಾಗಿ ರುವ ಲಕ್ಷ್ಮೀನಾರಾಯಣ ರೈ (66) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಕೆಲವು ಕಾಲದಿಂದ ಚಿಕಿತ್ಸೆಯಲ್ಲಿದ್ದರು. ಸುಮಾರು 18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ 95-96 ಇಸವಿಯಲ್ಲಿ ಸೇವೆಯಿಂದ ನಿವೃತ್ತರಾ ಗಿದ್ದರು. ಬಂಟರ ಸಂಘದ ಬೆಳ್ಳೂರು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಮೃತರು ಪತ್ನಿ ನಳಿನಾಕ್ಷಿ, ಮಕ್ಕಳಾದ ಹರ್ಷಿತ್ ರೈ, ಅಕ್ಷತ ಕೆ. ರೈ, ಅಳಿಯ ಅವಿನಾಶ್ ಶೆಟ್ಟಿ, ಸೊಸೆ ಸ್ವಾತಿ ರೈ, ಸಹೋದರಿ ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







