ನಿರ್ಜನ ಹಿತ್ತಿಲಲ್ಲಿ ಐಸ್‌ಕ್ರೀಂ ಬಾಂಬ್ ಪತ್ತೆ : ತೀವ್ರ ತನಿಖೆ ಆರಂಭ

ಕಾಸರಗೋಡು:    ನಿರ್ಜನ ಹಿತ್ತಿ ಲಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಐಸ್‌ಕ್ರೀಂ ಬಾಂಬ್ ಪತ್ತೆಯಾಗಿ ಅದು ಆ ಪರಿಸರದಲ್ಲಿ ಭಾರೀ ಆತಂಕದ ವಾತಾ ವರಣ ಸೃಷ್ಟಿಸಿದ ಘಟನೆ ನಡೆದಿದೆ.

ನೀಲೇಶ್ವರ ಸಮೀಪದ ಚಾಯೋಂ ನರಿಮಾಳದ ಸಾಬು ಆಂಟನಿ ಎಂಬವರ ಹಿತ್ತಿಲಲ್ಲಿ ನಿನ್ನೆ ಸಂಜೆ ಈ ಬಾಂಬ್ ಪತ್ತೆಯಾಗಿದೆ. ಅದು ಪತ್ತೆಯಾದಾಕ್ಷಣ  ಹಿತ್ತಿಲ ಮಾಲಕರು ನೀಲೇಶ್ವರ ಪೊಲೀ ಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಮಾತ್ರವಲ್ಲ ಕಾಸರ ಗೋಡಿನಿಂದ ಬಾಂಬ್ ನಿಷ್ಕ್ರಿಯದಳ, ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕಾಗಮಿಸಿ ನಡೆಸಿದ ಸತತ ಪ್ರಯತ್ನದ ಫಲವಾಗಿ ಬಾಂಬನ್ನು ಅಲ್ಲೇ ನಿಷ್ಕ್ರಿಯಗೊಳಿಸಲಾಯಿತು.

ಇಲ್ಲಿ ಬಾಂಬ್ ತಂದಿರಿಸಿದವರ ಪತ್ತೆಗಾಗಿ ಶ್ವಾನದಳದ ಶ್ವಾನಗಳು ಅಲ್ಲಿಂದ ಲಭಿಸಿದ ವಾಸನೆಯ ಜಾಡು ಹಿಡಿದು ಅರ್ಧಕಿಲೋ ಮೀಟರ್ ತನಕ ಸಂಚರಿಸಿದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಈ ಹಿತ್ತಿಲ ಗಡಿ ನಿರ್ಣಯಿಸಿ ಅದಕ್ಕೆ ಸುತ್ತುಗೋಡೆ ನಿರ್ಮಿಸಲು ಬಂದ ಕಾರ್ಮಿಕರು ಮೊದಲು ಐಸ್‌ಕ್ರೀಂ ಬಾಂಬನ್ನು ಪತ್ತೆಹಚ್ಚಿದ್ದರು. ಆದರೆ ಇಲ್ಲಿ ಬಾಂಬ್ ತಂದಿರಿಸಿದವರು ಯಾರು ಮತ್ತು ಯಾವ ಉದ್ದೇಶಕ್ಕಾಗಿ ಅದನ್ನು ತಂದಿರಿಸಿದ್ದರೆಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಪತ್ತೆಹಚ್ಚಲು ನೀಲೇಶ್ವರ ಪೊಲೀಸರು ಇದರ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

You cannot copy contents of this page