ಕಾಸರಗೋಡು: ಒಂದು ವರ್ಷ ಹಿಂದೆ ಸೇವೆಯಿಂದ ನಿವೃತ್ತಿಗೊಂಡ ಮೃಗಸಂರಕ್ಷಣಾ ಇಲಾಖೆ ಸಿಬ್ಬಂದಿ ಮನೆಯೊಳಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೂಡ್ಲು ಪಾರೆಕಟ್ಟೆ ಮುಕುಂದ ನಿವಾಸಿ ಬಿ. ಬಾಬುರಾಜ್ (57) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕೆಳಗಿಳಿಸಿ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 1 ಗಂಟೆಗೆ ಸಾವು ಸಂಭವಿಸಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಕೊಲ್ಲಂ ಅಂಜಾಲಮೂಡ್ ಪನಯಂ ನಿವಾಸಿಯಾದ ಬಾಬುರಾಜ್ ಕೆಲವು ವರ್ಷಗಳ ಹಿಂದೆ ಕಾಸರಗೋಡಿಗೆ ಬಂದಿದ್ದರು. ಕೂಡ್ಲು ಗುವೆತ್ತಡ್ಕ ನಿವಾಸಿಯೂ ಪಾಡಿ ಎಎಲ್ಪಿ ಶಾಲೆಯ ಅಧ್ಯಾಪಿಕೆಯಾದ ಆಶಾ ಎಂಬವರನ್ನು ಮದುವೆಯಾಗಿ ಪಾರೆಕಟ್ಟೆಯಲ್ಲಿ ವಾಸಿಸುತ್ತಿದ್ದರು.
ಮೃತರು ಮಕ್ಕಳಾದ ಸೌರವ್, ಸಯನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪಾರೆಕಟ್ಟೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿ ನಂತರ ಹುಟ್ಟೂರಾದ ಕೊಲ್ಲಂಗೆ ಕೊಂ ಡೊಯ್ಯಲಾಗುವುದೆಂದು ಸಂಬಂಧಿರು ತಿಳಿಸಿದ್ದಾರೆ.







