ಕಾಸರಗೋಡು: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ವಿವಿಧ ಕಾನೂನು ಉಲ್ಲಂಘನೆಗಳಿಗೆ ದಂಡ ಹೇರಲಾಗಿದೆ.
ನಿಷೇಧಿತ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್ಗಳನ್ನು ಗೋದಾಮಿನಲ್ಲಿ ಬಚ್ಚಿಟ್ಟಿರುವ ಕುಂಬಳೆ ಆರಿಕ್ಕಾಡಿಯ ಹೈಪರ್ ಮಾರ್ಕೆಟ್ ಮಾಲಕನಿಗೆ 10 ಸಾವಿರ ರೂ. ದಂಡ ಹೇರಿ ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮೊಗ್ರಾಲ್ ಹೊಳೆ ಸಮೀಪದ ರಸ್ತೆ ಬದಿ ರಾಶಿ ಹಾಕಿರುವ ತ್ಯಾಜ್ಯಗಳಿಂದ ಲಭಿಸಿದ ಪುರಾವೆ ಪ್ರಕಾರ ಹೈಪರ್ ಮಾರ್ಕೆಟ್, ಕಾಸರಗೋಡು ರೆಸ್ಟೋರೆಂಟ್ ಮಾಲಕರಿಗೆ 7 ಸಾವಿರ ರೂ. ದಂಡ ಹೇರಲಾಗಿದೆ. ಹೋಟೆ ಲ್ಗಳಿಂದಿರುವ ಉಪ ಯೋಗ ಜಲವನ್ನು ಸಾರ್ವಜನಿಕ ಚರಂಡಿಗೆ ಹರಿಯಬಿಟ್ಟಿರುವುದಕ್ಕೆ ಬಂದಡ್ಕದ ಫಾಸ್ಟ್ ಫುಡ್ ಮಾಲ ಕನಿಗೆ ೫ ಸಾವಿರ ರೂ. ದಂಡಹೇರಿ ಈ ಪೈಪ್ ಸಂಪರ್ಕವನ್ನು ಹೊರತುಪಡಿಸಲು ನಿರ್ದೇಶ ನೀಡಲಾಯಿತು.
ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಲಕ್ಷ್ಯ ವಾಗಿ ಬಿಸಾಡಿದ ಪನತ್ತಡಿಯ ಸೂಪರ್ ಮಾರ್ಕೆಟ್, ಬಂದಡ್ಕದ ಫ್ರೆಶ್ ಮಾರ್ಕೆಟ್, ಚೀಮೇನಿಯ ಸ್ಟೋರ್, ಅಪಾರ್ಟ್ಮೆಂಟ್ ಎಂಬೀ ಸಂಸ್ಥೆಯ ಮಾಲಕರಿಗೆ 10 ಸಾವಿರ ರೂ. ದಂಡ ಹೇರಲಾಗಿದೆ. ತಪಾಸಣೆ ತಂಡದಲ್ಲಿ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಅಸಿಸ್ಟೆಂಟ್ ಸೆಕ್ರೆಟರಿ ಟಿ.ಎಸ್. ಪ್ರಮೋದ್, ಹೆಲ್ತ್ ಇನ್ಸ್ಪೆಕ್ಟರ್ ಗಳಾದ ಸೌಮ್ಯ ಪಿ.ವಿ, ರೇವತಿ, ಮಿನಿ ಕುಮಾರಿ, ಸುಜ ಎ, ನಿಶಾ ಟಿ.ವಿ, ಟಿ.ಸಿ.ಶೈಲೇಶ್ ಇದ್ದರು.







