ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಮತದಾರರ ಯಾದಿಯ ಪ್ರತ್ಯೇಕ ಪರಿಷ್ಕರಣೆ ಆರಂಭಿಸಿರುವಂತೆ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಎನ್ಯುಮರೇಶನ್, ಫಾರ್ಮ್ 6 ಸಹಿತ ಎಲ್ಲಾ ಅರ್ಜಿ ಫಾರ್ಮ್‌ಗಳು, ಸೂಚನೆಗಳನ್ನು ಕನ್ನಡ ಭಾಷೆಯಲ್ಲೂ ಲಭ್ಯಗೊಳಿ ಬೇಕೆಂಬ ಬೇಡಿಕೆಯೊಂದಿಗೆ ಚುನಾವಣಾ ಆಯೋಗವನ್ನು ಸಮೀಪಿಸಿರುವು ದಾಗಿಯೂ, ಅನುಕೂಲ ತೀರ್ಮಾನ ಉಂಟಾಗ ಬಹುದೆಂದು ಸಂಬಂಧ ಪಟ್ಟ ಅಧಿಕಾರಿಗಳಿಂದ ಖಚಿತತೆ ಲಭಿಸಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮತದಾರರ ಯಾದಿ ಸಹಿತ ಕನ್ನಡ, ಮಲೆಯಾಳ ಭಾಷೆಗಳಲ್ಲಿ ಲಭ್ಯಗೊಳಿಸಬೇಕೆಂದು ರಾಷ್ಟ್ರೀಯ ಚುನಾವಣಾ ಆಯೋಗದ ತೀರ್ಮಾನಕ್ಕೆ ವಿರುದ್ಧವಾಗಿ ಎನ್ಯುಮರೇಶನ್ ಸಹಿತದ ಫಾರ್ಮ್‌ಗಳನ್ನು ಮಲೆಯಾಳದಲ್ಲಿ ಮಾತ್ರವಾಗಿ ಸಿದ್ಧಪಡಿಸಲಾಗಿದೆ. ಕನ್ನಡ ಮಾತ್ರ ತಿಳಿದಿರುವ ಮತದಾರರಿಗೆ ಇದು ಅತ್ಯಂತ ಹೆಚ್ಚು ಸಮಸ್ಯೆ ಸೃಷ್ಟಿಸಲಿದೆ ಯೆಂದು ಅಶ್ವಿನಿ ರಾಜ್ಯಚುನಾವಣಾ ಆಯೋಗಕ್ಕೆ ರವಾನಿಸಿದ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.







