ಸ್ಥಳೀಯಾಡಳಿತ ಚುನಾವಣೆ ಅಧ್ಯಕ್ಷರ ಮೀಸಲಾತಿ ನಿರ್ಣಯ

ಕಾಸರಗೋಡು:  ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಸಾರ್ವತ್ರಿಕ ಚುನಾವಣೆಗಾಗಿ ತ್ರಿಸ್ತರ ಪಂಚಾಯತ್‌ಗಳ ಅಧ್ಯಕ್ಷರ ಮೀಸಲಾತಿ ಸಂಬಂಧಿಸಿ ತೀರ್ಮಾನ ಉಂಟಾಗಿದೆ. ರಾಜ್ಯ ಚುನಾವಣಾ ಆಯೋಗ ಈ ಬಗೆಗಿರುವ ವಿಜ್ಞಾಪನೆಯನ್ನು ಪ್ರಕಟಿಸಿದೆ. ಜಿಲ್ಲೆಯಲ್ಲಿ ೬ ಬ್ಲೋಕ್ ಪಂಚಾಯತ್‌ಗಳಲ್ಲಿ  2 ಪಂಚಾಯತ್‌ಗಳು ಮಹಿಳಾ ಮೀಸಲಾತಿ ಹಾಗೂ ಒಂದು ಬ್ಲೋಕ್ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿಯಾಗಿ ನಿಗದಿಪಡಿಸಲಾಗಿದೆ. ಪರಪ್ಪ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ ಬ್ಲಾಕ್  ಪಂಚಾಯತ್ ಆಗಿದೆ. ಕಾಞಂಗಾಡ್, ನೀಲೇಶ್ವರ ಮಹಿಳಾ ಮೀಸಲಾತಿ ಬ್ಲೋಕ್ ಪಂಚಾಯತ್‌ಗಳಾಗಿಯೂ ನಿಗದಿಪಡಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಮೂರು ನಗರಸಭೆಗಳಲ್ಲಿ ಒಂದು ನಗರಸಭೆಯನ್ನು ಮಹಿಳೆ ಯರಿಗಾಗಿ ಮೀಸಲಿರಿಸಲಾಗಿದೆ. ಕಾಸರಗೋಡು ನಗರಸಭೆ ಈ ಬಾರಿ ಮಹಿಳೆಯ ರಿಗಾಗಿ ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ 38 ಗ್ರಾಮ ಪಂಚಾಯತ್ ಗಳಲ್ಲಿ 21 ಗ್ರಾಮ ಪಂಚಾಯತ್ ಗಳನ್ನು ಮೀಸಲಾತಿ ಪಂಚಾಯ ತ್‌ಗಳಾಗಿ ಗುರುತಿಸಲಾಗಿದ್ದು, ಇದರಲ್ಲಿ 17  ಪಂಚಾಯತ್‌ಗಳು  ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.

ಒಂದು ಪರಿಶಿಷ್ಟ ಜಾತಿ ಮೀಸಲಾತಿ, ಇನ್ನೊಂದು ಪರಿಶಿಷ್ಟ ಪಂಗಡ ಮೀಸಲಾತಿ,  ಒಂದು ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ, ಇನ್ನೊಂದು ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ ಪಂಚಾಯತ್ ಆಗಿ ಮೀಸಲಿರಿಸಲಾಗಿದೆ. ಬೆಳ್ಳೂರು ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ ಪಂಚಾಯತ್ ಆಗಿದ್ದು, ಚೆಂಗಳ ಪರಿಶಿಷ್ಟ ಜಾತಿ ಮೀಸಲಾತಿ ಪಂಚಾಯತ್ ಆಗಿದೆ. ಕಳ್ಳಾರು ಪರಿಶಿಷ್ಟ ಪಂಗಡ ಸ್ತ್ರೀ ಮೀಸಲಾತಿ ಗ್ರಾಮ ಪಂಚಾಯತ್ ಆಗಿದ್ದರೆ ಕಿನಾನೂರು ಕರಿಂದಳ ಪರಿಶಿಷ್ಟ ಪಂಗಡ ಮೀಸಲಾತಿ ಗ್ರಾಮ ಪಂಚಾಯತ್ ಆಗಿದೆ. ಮಹಿಳಾ ಮೀಸಲಾತಿ ಪಂಚಾಯತ್‌ಗಳಾಗಿ ಕುಂಬ್ಡಾಜೆ, ಕಾರಡ್ಕ, ಕುತ್ತಿಕ್ಕೋಲ್, ಪೈವಳಿಕೆ, ಪುತ್ತಿಗೆ, ಎಣ್ಮಕಜೆ, ಮಧೂರು, ಚೆಮ್ನಾಡ್, ಪಳ್ಳಿಕ್ಕೆರೆ, ಅಜಾನೂರು, ಪುಲ್ಲೂರುಪೆರಿಯ, ಬಳಾಲ್, ಈಸ್ಟ್ ಎಳೇರಿ, ಕಯ್ಯೂರು ಚೀಮೇನಿ, ವಲಿಯಪರಂಬ, ಪಡನ್ನ, ತೃಕರಿಪುರವನ್ನು ನಿಗದಿಪಡಿಸಲಾಗಿದೆ.

You cannot copy contents of this page