ಮಂಜೇಶ್ವರ: ಮೀನು ಸಾಗಿಸುತ್ತಿದ್ದ ಪಿಕಪ್ ವಾಹನದ ಆಕ್ಸಿಲ್ ತುಂಡಾಗಿ ಚಕ್ರ ಬೇರ್ಪಟ್ಟು ಸರ್ವೀಸ್ ರಸ್ತೆಗೆ ಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಕುಂಜತ್ತೂರು ಹೆದ್ದಾರಿಯಲ್ಲಿ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಅಪಾಯ ಸಂಭವಿಸಲಿಲ್ಲ. ಕಾಸರಗೋಡು ಭಾಗದಿಂದ ಮಂಗಳೂರು ಕಡೆಗೆ ಮೀನು ಹೇರಿಕೊಂಡು ತೆರಳುತ್ತಿದ್ದ ಪಿಕಪ್ ಕುಂಜತ್ತೂರು ಹೆದ್ದಾರಿಯಲ್ಲಿ ಸಂಚರಿಸುತ್ತಿರುವಾಗ ಅದರ ಹಿಂಬದಿಯ ಆಕ್ಸಿಲ್ ತುಂಡಾಗಿ ಚಕ್ರ ಬೇರ್ಪಟ್ಟಿದ್ದು ನಿಯಂತ್ರಣ ತಪ್ಪಿದ ವಾಹನ ಹೆದ್ದಾರಿ ಮಧ್ಯೆ ಮಗುಚಿಬಿದ್ದಿದೆ. ಈ ವೇಳೆ ತುಂಡಾದ ಆಕ್ಸಿಲ್ ಚಕ್ರ ಸಹಿತ ಹೆದ್ದಾರಿಯ ತಡೆಗೋಡೆಯಿಂದ ಮೇಲೆ ಹಾರಿ ಸರ್ವೀಸ್ ರಸ್ತೆಗೆ ಬಿದ್ದಿದೆ. ಅಪಘಾತದಲ್ಲಿ ಮೀನು ಪೂರ್ತಿ ರಸ್ತೆಯಲ್ಲಿ ಹರಡಿಕೊಂಡಿತ್ತು.







