ದೆಹಲಿ: ದೇಶದಲ್ಲಿ ಬೃಹತ್ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಹರ್ಯಾಣದಲ್ಲಿ 300 ಕೆಜಿ ಆರ್ಡಿಎಕ್ಸ್ ಮತ್ತು ಇತರ ಭಾರೀ ಸ್ಫೋಟಕ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಹರ್ಯಾಣದ ಫರೀದಾಬಾದ್ನಲ್ಲಿ ಭಯೋತ್ಪಾದಕ ಸಂಪರ್ಕ ಹೊಂದಿರುವ ಶಂಕಿತ ವೈದ್ಯರೊಬ್ಬರಿಂದ ಈ ಬೃಹತ್ ಪ್ರಮಾಣದ ಆರ್ಡಿಎಕ್ಸ್, ಎಕೆ 47 ಮತ್ತು ಮದ್ದುಗುಂಡುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಶಂಕಿತ ವೈದ್ಯನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಪೊಲೀಸರ ವಶಕ್ಕೊ ಗಾದ ಈ ವೈದ್ಯ ಜಮ್ಮು ಕಾಶ್ಮೀರಕ್ಕೆ ಸೇರಿದವನಾಗಿ ದ್ದಾನೆ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಹರ್ಯಾಣ ಪೊಲೀಸರು ಈತನಕ ಬಿಡುಗಡೆಮಾಡಿಲ್ಲ. ಇದಕ್ಕೆ ಸಂಬಂಧಿಸಿ ಇನ್ನೋರ್ವನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಜಮ್ಮು ಮತ್ತು ಕಾಶ್ಮೀರದ ಸಹರಾನ್ಪುರದ ವೈದ್ಯನಾಗಿದ್ದಾನೆ. ಅನಂತ್ನಾಗ್ನಲ್ಲಿ ಭಯೋತ್ಪಾದಕ ಸಂಘಟನೆಯಾದ ಜೈಶ್ ಎ ಮೊಹಮ್ಮದ್ ಜತೆ ಈತ ನಿಕಟ ಸಂಪರ್ಕ ಹೊಂದಿದ್ದಾನೆ. ಈತ ಫರೀದಾಬಾದ್ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದನು. ಅಲ್ಲಿಗೆ ಪೊಲೀಸರು ದಾಳಿ ನಡೆಸಿ ಈ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ವೈದ್ಯ ಅಲ್ಲಿ ವಾಸಿಸುತ್ತಿರಲಿಲ್ಲ. ಸ್ಫೋಟಕ ವಸ್ತುಗಳನ್ನು ದಾಸ್ತಾನು ಇರಿಸಲು ಮಾತ್ರವೇ ಆ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಕೊಠಡಿಯಿಂದ 300 ಕೆಜಿ ಆರ್ಡಿಎಕ್ಸ್ ಮಾತ್ರವಲ್ಲದೆ ಎಕೆ೪೭ ರೈಫಲ್ಸ್, 84 ಕಾರ್ಟೀಜನ್ಸ್ಗಳು ಮತ್ತು ರಾಸಾಯನಿಕ ಸಾಮಗ್ರಿಗಳನ್ನು ತುಂಬಿಸಿಡಲಾಗಿದ್ದ 14 ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.






