ಮುಳ್ಳೇರಿಯ: 64ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಾಳೆಯಿಂದ 15ರವರೆಗೆ ಮುಳ್ಳೇರಿ ಯದಲ್ಲಿ ನಡೆಯಲಿದೆ. ಮುಳ್ಳೇ ರಿಯ ಜಿವಿಎಚ್‌ಎಸ್‌ಎಸ್‌ನಲ್ಲಿ ನಡೆಯುವ ಈ ಕಲೋತ್ಸವದಲ್ಲಿ 330 ಸ್ಪರ್ಧೆಗಳಲ್ಲಿ 6000ದಷ್ಟು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
ಕುಂಬಳೆ ಉಪಜಿಲ್ಲೆಯಲ್ಲಿ ಒಟ್ಟು 120 ಶಾಲೆಗಳಿದ್ದು, ಈ ಪೈಕಿ 98 ಶಾಲೆಗಳಿಂದ ಮಕ್ಕಳು ಹೆಸರು ನೋಂದಾಯಿಸಿದ್ದಾರೆ. ನಾಳೆ 18 ವೇದಿಕೆಗಳಲ್ಲಿ ಸ್ಪರ್ಧೆ ನಡೆಯಲಿರುವುದು. ಕಲೋತ್ಸವಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.






