ದೆಹಲಿ ಸ್ಫೋಟ : ಕಾರು ಮಾಲಕ ಸೆರೆ: ಎನ್‌ಐಎ ತನಿಖೆ , ಬಾಂಬರ್ ಉಮ್ಮರ್ ಮೊಹಮ್ಮದ್

ದೆಹಲಿ: ದೆಹಲಿಯ ಕೆಂಪುಕೋ ಟೆ ಬಳಿ ನಿನ್ನೆ ಸಂಜೆ 13 ಮಂದಿಯ  ಪ್ರಾಣ ಬಲಿತೆಗೆದುಕೊಂಡು ಹಲ ವಾರು ಮಂದಿ ಗಾಯಗೊಂಡ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ ಕೈಗೆತ್ತಿ ಕೊಂಡಿದೆ. ಸ್ಫೋಟಗೊಂಡ i20 ಕಾರಿನ ಮಾಲಕ ಹರ್ಯಾಣ ಗ್ರಾಮದ ಮೊಹಮ್ಮದ್ ಸಲ್ಮಾನ್ ಎಂಬಾತನಾಗಿದ್ದಾನೆಂದು  ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ ಯುಎಪಿಎ ಕಾನೂನು ಪ್ರಕಾರ ಇದರ ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ ಕಾರು ಸ್ಫೋಟದ ಪ್ರಧಾನ ಆರೋಪಿ ಮೊಹ ಮ್ಮದ್ ಉಮ್ಮರ್  ಎಂಬಾತನ ಮೊದಲ ಪೋಟೋವನ್ನು ತನಿಖಾ ತಂಡ ಬಿಡುಗಡೆಮಾಡಿದೆ. ಈ ಸ್ಫೋಟಕ್ಕೆ ಆತ್ಮಾಹುತಿ ಬಾಂಬರನ್ನು ಉಪಯೋಗಿ ಲಾಗಿದೆ. ಈ ಬಾಂಬರ್   ಉಮ್ಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಈತ ಸ್ಫೋಟ ನಡೆಯುವ ಮೂರು ಗಂಟೆ ಮೊದಲೇ ಬಂದು ಕಾರಿನಲ್ಲಿ ಕುಳಿತುಕೊಂಡಿದ್ದನು. ಸ್ಫೋಟದ ಬಳಿಕ  ಲಭಿಸಿದ ಮಾನವ ಅವಯವಗಳನ್ನು ಡಿಎನ್‌ಎ ಪರೀಕ್ಷೆಗಾಗಿ   ಕಳುಹಿಸಿಕೊಡಲಾಗಿದೆ.  ಅದರ ಫಲಿತಾಂಶ ಲಭಿಸಿದ ಬಳಿಕವಷ್ಟೇ ಮಾನವ ಬಾಂಬರ್ ಮೊಹಮ್ಮದ್ ಉಮ್ಮರ್ ಆಗಿದ್ದಾನೆಯೇ ಎಂಬುವು ದನ್ನು ಖಾತರಿಪಡಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ. 

ದೆಹಲಿಯಲ್ಲಿ ನಡೆದ ಈ ಬಾಂಬ್ ಸ್ಫೋಟಕ್ಕೂ ತಿಂಗಳುಗಳ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯಕ್ಕೂ ನಂಟು ಹೊಂದಿರುವ  ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಜೈಶ್ ಎ ಮೊಹಮ್ಮದ್‌ನ  ನಂಟು ಇದರಲ್ಲಿ ಒಳಗೊಂಡಿದೆಯೇ ಎಂಬ   ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.  ಜೈಶ್‌ಎ ಮೊಹಮ್ಮದ್‌ನ ಕೈವಾಡ ಇದರಲ್ಲಿ ಸ್ಪಷ್ಟಗೊಂಡಲ್ಲಿ ಆಪರೇಶನ್ ಸಿಂಧೂರ್‌ನ ಎರಡನೇ ಭಾಗದ ಕಾರ್ಯಾಚರಣೆ ನಡೆಸಲಾಗುವುದೆಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಗೃಹಖಾತೆ ಸಚಿವ ಹಾಗೂ ರಕ್ಷಣಾ ಸಚಿವರು ಈಗಾಗಲೇ ನೀಡಿದ್ದಾರೆ. ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಕಾಸರ ಗೋಡು ಸೇರಿದಂತೆ ದೇಶಾದ್ಯಂತ ಕಟ್ಟೆಚ್ಚರ ಪಾಲಿಸಲಾಗುತ್ತದೆ. ಇದರಂತೆ ನಿನ್ನೆ ಕಾಸರಗೋಡು ಜಿಲ್ಲೆಯ ಎಲ್ಲಾ ರೈಲು,  ಬಸ್ ನಿಲ್ದಾಣಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಕ್ವಾಡ್, ಶ್ವಾನದಳಗಳನ್ನು ಬಳಸಿ ಪೊಲೀಸರು ನಿನ್ನೆಯಿಂದ ವ್ಯಾಪಕ ತಪಾಸಣೆ ಆರಂಭಿಸಲಾಗಿದೆ. ಇದು ಇನ್ನೂ ಮುಂದುವರಿಯಲಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page