ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಅಸೌಖ್ಯದಿಂದ ನಿಧನ ಹೊಂದಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮಜಿಬೈಲು ಶಾಲೆ ಬಳಿಯ ಅಬ್ದುಲ್ ಸಲೀಂ- ಫೌಸಿಯ ದಂಪತಿ ಪುತ್ರ ಫಾಸಿಲ್ ಸಲೀಂ (11) ಮೃತಪಟ್ಟ ವಿದ್ಯಾರ್ಥಿ. ಕಳೆದ ಮೂರು ತಿಂಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದನು. 10 ದಿನದ ಹಿಂದೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ ಅಲ್ಲಿ ಅಂತ್ಯ ಸಂಭವಿಸಿದೆ. ಮೃತದೇಹವನ್ನು ಊರಿಗೆ ತಂದು ಮನೆ ಪರಿಸರದ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ಬಾಲಕ ತಂದೆ, ತಾಯಿ ಅಲ್ಲದೆ ಇಬ್ಬರು ಸಹೋದರಿಯರು, ಓರ್ವ ಸಹೋದರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಅಧ್ಯಾಪಕರು, ಮುಖ್ಯೋಪಾಧ್ಯಾಯರು ಅಂತ್ಯ ಕ್ರಿಯೆ ವೇಳೆ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.







