ಹೆಚ್ಚುತ್ತಿರುವ ಅಪ್ರಾಪ್ತರ ವಾಹನ ಸವಾರಿ : ಮಂಜೇಶ್ವರ ಪೊಲೀಸರಿಂದ ಬಿಗು ತಪಾಸಣೆ

ಮಂಜೇಶ್ವರ: ಅಪ್ರಾಪ್ತರು ಚಲಾಯಿಸಿದ ದ್ವಿಚಕ್ರ ವಾಹನಗಳು, ದಾಖಲೆಪತ್ರಗಳಿಲ್ಲದೆ ಚಲಾಯಿಸಿದ ವಾಹನ,ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವುದು  ಮೊದಲಾದ ಪ್ರಕರಣಗಳಲ್ಲಿ ಪೊಲೀಸರು ವಾಹನಗಳನ್ನು ವಶಪಡಿಸುತ್ತಿದ್ದಾರೆ. ಈ ರೀತಿಯ ತಪಾಸಣೆಯನ್ನು ಮಂಜೇಶ್ವರ ಪೊಲೀಸರು ಬಿಗುಗೊಳಿಸಿದ್ದು, ಕಳೆದ ಒಂದು ವಾರದಲ್ಲಿ 15ರಷ್ಟು ಪ್ರಕರಣಗಳು ದಾಖಲಾಗಿವೆ.

ಮೊನ್ನೆ ಸಂಜೆ ಮೀಯಪದವಿನಲ್ಲಿ ಎಸ್‌ಐ ಉಮೇಶ್ ಕೆ.ಆರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬಾಯಿಕಟ್ಟೆ ಭಾಗದಿಂದ ಮೀಯಪದವು ಕಡೆಗೆ ಅಪ್ರಾಪ್ತ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಇಂದು ಮುಂಜಾನೆ ಕಣ್ವತೀರ್ಥದಿಂದ ಮದ್ಯ ದಮಲಿನಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದಾಗ ವಾಹನವನ್ನು ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ.

You cannot copy contents of this page