ಮಂಜೇರಿ: 11 ವರ್ಷದ ಪುತ್ರಿಯನ್ನು ಮಾನಭಂಗಗೈದ ತಂದೆಗೆ ಮಂಜೇರಿ ಸ್ಪೆಷಲ್ ಪೋಕ್ಸೋ ನ್ಯಾಯಾಲಯ ವಿವಿಧ ಕಾಯ್ದೆಗಳಲ್ಲಾಗಿ 178 ವರ್ಷ 1 ತಿಂಗಳು ಕಠಿಣ ಸಜೆ, 10.75 ಲಕ್ಷ ರೂ. ದಂಡ ಶಿಕ್ಷೆ ವಿಧಿಸಿದೆ. ಅರಿಕೋಡ್ ನಿವಾಸಿಯಾದ ನ್ಯಾಯಾಧೀಶ ಎ.ಎಂ. ಅಶ್ರಫ್ ಈ ಶಿಕ್ಷೆ ಘೋಷಿಸಿದ್ದಾರೆ. ಪೋಕ್ಸೋ ಆಕ್ಟ್ನ ಮೂರು ವಿಭಾಗಗಳಲ್ಲಾಗಿ ಭಾರತೀಯ ಶಿಕ್ಷಾ ಕಾನೂನಿನ 376 ಕಾಯ್ದೆಯಲ್ಲಿ ತಲಾ 40 ವರ್ಷದಂತೆ ಕಠಿಣ ಸಜೆ ಹಾಗೂ 2 ಲಕ್ಷ ರೂ. ದಂಡ ಪಾವತಿಸಬೇಕಾಗಿದೆ. ದಂಡ ಪಾವತಿಸದಿದ್ದರೆ ಪ್ರತಿ ಕಾಯ್ದೆಯಂತೆ ತಲಾ ಮೂರು ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ಇದರ ಹೊರತಾಗಿ ಪೋಕ್ಸೋ ಆಕ್ಟ್ನ 9ಎಂ, 9ಎನ್, ಐಪಿಸಿ 506 ಎಂಬೀ ಕಾಯ್ದೆಗಳಲ್ಲಿ 5 ವರ್ಷದಂತೆ ಕಠಿಣ ಸಜೆ, 50 ಲಕ್ಷ ರೂ. ದಂಡ ಶಿಕ್ಷೆ ಘೋಷಿಸಲಾಗಿದೆ. ದಂಡ ಪಾವತಿಸದಿದ್ದರೆ ಒಂದು ತಿಂಗಳಿನAತೆ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ಬಾಲಕಿಯನ್ನು ಹಲ್ಲೆಗೈದಿರುವುದಕ್ಕೆ ಒಂದು ವರ್ಷ ಕಠಿಣ ಸಜೆ, 25,000 ರೂ. ದಂಡ, ದಂಡ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ.
2022- 2023ರಲ್ಲಿ ತಂದೆ ಮೂರು ಬಾರಿಯಾಗಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಗೈದಿದ್ದನೆಂದು ಪ್ರಕರಣ ದಾಖಲಾಗಿತ್ತು. ಮನೆಯಲ್ಲಿ ನಿದ್ರಿಸುತ್ತಿದ್ದ 11ರ ಬಾಲಕಿಯನ್ನು 46ರ ಹರೆಯದ ತಂದೆ ಬೆದರಿಸಿ ಮಾನಭಂಗಗೈದಿದ್ದಾನೆ. ನೆರೆಮನೆ ನಿವಾಸಿ ಭಿನ್ನಸಾಮರ್ಥ್ಯದವಳ ಮನೆಗೆ ನುಗ್ಗಿ ಮಾನಭಂಗ ಗೈದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಮಂಜೇರಿ ನ್ಯಾಯಾಲಯ 10 ವರ್ಷದ ಕಠಿಣ ಸಜೆ ಶಿಕ್ಷೆ ಈತನಿಗೆ ನೀಡಿತ್ತು. ಇದರಲ್ಲಿ ಈತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಅರಿಕೋಡ್ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಎಂ. ಅಬ್ಬಾಸ್ ಅಲಿ ಈ ಕೇಸಿನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ಗೆ ಬೇಕಾಗಿ ಪಬ್ಲಿಕ್ ಪ್ರೋಸಿಕ್ಯೂಟರ್ ಅಡ್ವಕೇಟ್ ಎ. ಸೋಮಸುಂದರನ್ ಹಾಜರಾಗಿದ್ದರು.







