ಪಿಡಬ್ಲ್ಯುಡಿಯ ಅನಾಸ್ಥೆ: ಬ್ಯಾಂಕ್ ರಸ್ತೆ ದುರಸ್ತಿಗೊಳಿಸದಿದ್ದರೆ ಖಾಸಗಿ ಬಸ್‌ಗಳು ಸಂಚಾರ ಮೊಟಕುಗೊಳಿಸುವುದಾಗಿ ಎಚ್ಚರಿಕೆ

ಕಾಸರಗೋಡು: ನಗರದ ರೈಲ್ವೇ ನಿಲ್ದಾಣ-ಕರಂದಕ್ಕಾಡು-ಮಧೂರು ರೂಟ್‌ನಲ್ಲಿ ರಸ್ತೆ ಶೋಚನೀಯಾವಸ್ಥೆ ಗೊಂಡು ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಹಲವು ಬಾರಿ ದೂರು ನೀಡಿದ್ದರೂ ಇದುವರೆಗೂ ಸೂಕ್ತ ಪರಿಹಾರ ಉಂಟಾಗಲಿಲ್ಲವೆಂದು ದೂರಲಾಗಿದೆ. ರಸ್ತೆ  ಡಾಮರೀಕರಣ ಆರಂಭಗೊಂಡು ತಿಂಗಳುಗಳು ಕಳೆದರೂ ಇನ್ನೂ ಕೂಡಾ ಕಾಮಗಾರಿ ಪೂರ್ತಿ ಗೊಂಡಿಲ್ಲ. ಹಲವು ಬಾರಿ ಸಂಬಂಧಪಟ್ಟ ವರಿಗೆ ಈ ಬಗ್ಗೆ ತಿಳಿಸಲಾಗಿದ್ದರೂ ಮಳೆಯ ಹೆಸರಲ್ಲಿ ಮುಂದೂಡಲಾಗು ತ್ತಿತ್ತು.  ಮಳೆಗಾಲ ಮುಗಿದಾಗ ಡಾಮರೀಕರಣ ಪೂರ್ತಿಗೊಳಿಸುವು ದಾಗಿ ಪಿಡಬ್ಲ್ಯು ಡಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ರಸ್ತೆಯಲ್ಲಿ ಹೊಂಡಗಳೆದ್ದು ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಸದಾ ಸಮಯ ರಸ್ತೆಯಲ್ಲಿ ಬ್ಲೋಕ್ ಕಂಡುಬರುತ್ತಿದೆ. ಇದರಿಂದಾಗಿ ಸಮಯ ಪಾಲನೆ ನಡೆಸಿ ಸಂಚರಿಸುವ ಬಸ್‌ಗಳಿಗೆ ಸಂಚಾರ ಮೊಟಕುಗೊಳಿ ಸಬೇಕಾಗಿ ಬರುತ್ತಿದ್ದು, ಇದರಿಂದ ಬಹಳ ನಷ್ಟ ಉಂಟಾಗುತ್ತಿದೆ. ಬಸ್‌ಗಳು ಹಳೆ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ತಾಲೂಕು ಕಚೇರಿ ಪರಿಸರದ ಮೂಲಕ ಸುತ್ತಿ ಸಾಗುವುದರಿಂದಾಗಿ  ರಸ್ತೆ ತಡೆ ಸೃಷ್ಟಿಯಾಗಿ  ಸಂಚಾರ ಮೊಟಕು ಗೊಳಿಸಬೇಕಾದ ಸ್ಥಿತಿಯಾಗುತ್ತಿದೆ. ಇದರಿಂದಾಗಿ ಹಳೆ ಬಸ್ ನಿಲ್ದಾಣಕ್ಕಿರುವ ಸಂಚಾರವನ್ನೇ ಮೊಟಕುಗೊಳಿಸಬೇಕಾದ ಸ್ಥಿತಿ ಉಂಟಾಗುತ್ತಿದೆ. ನವಂಬರ್ 30ರ ಮುಂಚಿತವಾಗಿ ರಸ್ತೆ ದುರಸ್ತಿಗೊಳಿಸಿ ಸಂಚಾರಯೋಗ್ಯಗೊಳಿಸದಿದ್ದರೆ ದಶಂಬರ 1ರಿಂದ ಹಳೆ ಬಸ್ ನಿಲ್ದಾಣದಿಂದಲೇ ಬಸ್‌ಗಳು ಹೊಸ ಬಸ್ ನಿಲ್ದಾಣಕ್ಕೆ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ರಸ್ತೆ ದುರಸ್ತಿಗೊಳಿಸಬೇಕೆಂದು ಬಸ್ ಕಾರ್ಮಿಕರು ಹಾಗೂ ಮಾಲಕರು ಆಗ್ರಹಿಸಿದ್ದಾರೆ.

You cannot copy contents of this page