ಕಾಸರಗೋಡು: ಮಾಜಿ ಗಲ್ಫ್ ಉದ್ಯೋಗಿ ಹಾಗೂ ಆಟೋರಿಕ್ಷಾ ಚಾಲಕನಾಗಿದ್ದ ವ್ಯಕ್ತಿ ಮನೆಯ ಕಾರ್ಶೆಡ್ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾದ ಘಟನೆ ನಡೆದಿದೆ.
ಮೂಲತಃ ಬೇಕಲ ಮಾಲಾಂಕುನ್ನು ನಿವಾಸಿಯೂ ಈಗ ಕೇಳುಗುಡ್ಡೆ ರಸ್ತೆಯ ಹಳೆ ಚೂರಿಯ ರೇಷ್ಮಾ ಮಂಜಿಲ್ ನಿವಾಸಿ ಎನ್. ನಸೀರ್ ಅಹಮ್ಮದ್ (59) ಸಾವನ್ನಪ್ಪಿದ ವ್ಯಕ್ತಿ. ಇವರು ಈ ಹಿಂದೆ ಗಲ್ಫ್ನಲ್ಲಿದ್ದರು. ನಂತರ ಊರಿಗೆ ಬಂದ ರಿಕ್ಷಾ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ಅವರಿಗೆ ಅಸೌಖ್ಯ ತಗಲಿದ್ದು, ಅದರಿಂದ ಅವರು ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಬ್ದುಲ್ ರಜಾಕ್- ಫಾತಿಮ ದಂಪತಿ ಪುತ್ರನಾದ ಮೃತರು ಪತ್ನಿ ರೇಷ್ಮಾ, ಮಕ್ಕಳಾದ ನೌಶೀಲ್, ನಸೀನ, ರಿಯಾಫಾತಿಮ, ಅಳಿಯ ಶಾಹಿದ್, ಸಹೋದರರಾದ ಸಿರಾಜ್, ಶಬೀರ್, ಸಮೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






