ಕಾಸರಗೋಡು: ಅಜಾಗರೂಕತೆ ಯಿಂದ ಪ್ರಾರ್ಥನಾ ಕೊಠಡಿಯ ಬಾಗಿಲಿನ ಬೀಗ ಲಾಕ್ ಆಗಿ ತೆರೆಯಲಾಗದ ಕಾರಣ 3 ವರ್ಷದ ಬಾಲಕ ಒಂದು ಗಂಟೆ ಕಾಲ ಕೊಠಡಿಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಚೆರ್ಕಳ ನಿವಾಸಿ ನೌಫಲ್‌ನ ಪುತ್ರ ಗಾಜು ಹಾಕಿದ ಪ್ರಾರ್ಥನಾ ಕೊಠಡಿಯಲ್ಲಿ ಸಿಲುಕಿಕೊಂಡಿದ್ದನು. ನಿನ್ನೆ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಹೆತ್ತವರು ಸೇರಿ ಬಹಳ ಹೊತ್ತು ಬಾಗಿಲು ತೆರೆಯಲು ಯತ್ನಿಸಿದರಾದರೂ ಸಫಲರಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶ್‌ರ ನೇತೃತ್ವದಲ್ಲಿ ತಲುಪಿ 20 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬಾಗಿಲನ್ನು ತೆರೆದಿದ್ದಾರೆ.ಎಸ್. ಅರುಣ್ ಕುಮಾರ್, ಹೋಮ್‌ಗಾರ್ಡ್ ಪಿ. ಶ್ರೀಜಿತ್ ತಂಡದಲ್ಲಿದ್ದರು.






