ಸೀತಾಂಗೋಳಿ: ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪದ ಗೂಡಂಗಡಿಗೆ ಕಳ್ಳರು ದಾಳಿ ನಡೆಸಿದ್ದಾರೆ. ಅಂಗಡಿಯ ಕಬ್ಬಿಣದ ಗ್ರಿಲ್ಸ್ನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಗ್ಯಾಸ್ ಸಿಲಿಂಡರ್, ಸ್ಟವ್,ಮಿಠಾಯಿಗಳು, ಅಕ್ಕಿ ಮೊದಲಾದವುಗಳನ್ನು ದೋಚಿ ದ್ದಾರೆ. ಸೀತಾಂಗೋಳಿ ಸಮೀಪ ವಾಸಿಸುವ ನಬೀಸ ಎಂಬವರ ಗೂಡಂಗಡಿಯಿಂದ ಕಳವು ನಡೆದಿದೆ. ಇಂದು ಬೆಳಿಗ್ಗೆ ಅಂಗಡಿ ತೆರೆಯಲೆಂದು ನಬೀಸ ತಲುಪಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಒಳಗೆ ಪ್ರವೇಶಿಸಿ ನೋಡಿದಾಗ ಗ್ಯಾಸ್ ಸಿಲಿಂಡರ್ ಸಹಿತ ವಿವಿಧ ವಸ್ತುಗಳು ಕಳವಿಗೀಡಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.






