ಪೊಲೀಸರಿಗೆ ಹಲ್ಲೆ: ಕೊಲೆಯತ್ನ ಸಹಿತ 22 ಪ್ರಕರಣಗಳ ಆರೋಪಿ ಬಂಧನ

ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ   ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ  ಕೊಲೆಯತ್ನ ಸಹಿತ ೨೨ರಷ್ಟು ಪ್ರಕರಣಗಳಲ್ಲಿ ಆರೋಪಿ ಯಾದ ಕುಖ್ಯಾತ ಗೂಂಡಾನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಕೂಡ್ಲು ಪಾರೆಕಟ್ಟೆ ಆರ್‌ಡಿನಗರದ   ಅಜಯ್ ಕುಮಾರ್ ಶೆಟ್ಟಿ ಯಾನೆ ತೇಜು (29) ಎಂಬಾತನನ್ನು ನೀಲೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ನಿಬಿನ್ ಜೋಯ್ ಬಂಧಿಸಿದ್ದಾರೆ.  ನಿನ್ನೆ ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಕರುವಚ್ಚೇರಿ ಲೋಕೋಪಯೋಗಿ ಕಚೇರಿ ಮುಂದಿನ ರಸ್ತೆಯಲ್ಲಿ ತೇಜು ಜನರಿಗೆ  ಬೆದರಿಕೆಯೊಡ್ಡಿದ್ದನು.  ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಈತನನ್ನು ಸೆರೆಹಿಡಿಯುವ ವೇಳೆ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುಧೀರ್‌ಗೆ ಆರೋಪಿ ಹಲ್ಲೆಗೈದಿದ್ದು,  ಸಮವಸ್ತ್ರವನ್ನು  ಹಿಡಿದೆಳೆದು ಹರಿದಿದ್ದನು.  ಇದರಂತೆ ಈತನನ್ನು ಬಂಧಿಸಲಾಗಿದೆ.

 ಕಾಸರಗೋಡಿನಲ್ಲಿ ಕೊಲೆ  ಯತ್ನ, ಹೊಡೆದಾಟ, ಕೋಮುಗಲಭೆ ಸಹಿತ 22ರಷ್ಟು ಪ್ರಕರಣಗಳಲ್ಲಿ ಆರೋಪಿಯಾದ ತೇಜುನನ್ನು ಪೊಲೀಸರು ಗೂಂಡಾ ಪಟ್ಟಿಯಲ್ಲಿ ಒಳಪಡಿಸಿದ್ದರು. ಆರೋಪಿಯನ್ನು ವೈದ್ಯಕೀಯ ತಪಾಸಣೆ ಬಳಿಕ ಹೊಸದುರ್ಗ ಜ್ಯುಡೀಶಿಂiiಲ್ ಪ್ರಥಮ ದರ್ಜೆ(2) ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page