ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗಿರುವ ನಾಮಪತ್ರ ಹಿಂತೆಗೆಯಲಿರುವ ಕೊನೆಯ ದಿನಾಂಕ ನಿನ್ನೆ ಸಂಜೆ ಕೊನೆಗೊಂಡಾಗ ಜಿಲ್ಲಾ ಪಂಚಾಯತ್ನ 18 ಡಿವಿಶನ್ಗಳಿಗೆ 62 ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಒಟ್ಟು 91 ಮಂದಿ ನಾಮಪತ್ರ ಸಲ್ಲಿಸಿದ್ದರು. 29 ಮಂದಿ ಹಿಂತೆಗೆದರು.
ಮಂಜೇಶ್ವರ ಬ್ಲೋಕ್ ಪಂಚಾ ಯತ್ನ 16 ಡಿವಿಶನ್ಗಳಿಗೆ 57 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. 77 ಮಂದಿ ನಾಮಪತ್ರ ಸಲ್ಲಿಸಿದ್ದು, 20 ಮಂದಿ ಹಿಂತೆಗೆದಿದ್ದಾರೆ. ಇದೇ ರೀತಿ ಕಾಸರಗೋಡು ಬ್ಲೋಕ್ ಪಂಚಾಯ ತ್ನ 18 ಡಿವಿಶನ್ಗಳಿಗೆ 63 ಮಂದಿ ಸ್ಪರ್ಧಿಸುತ್ತಿದ್ದಾರೆ. 86 ಮಂದಿ ನಾಮಪತ್ರ ಸಲ್ಲಿಸಿದ್ದು, 23 ಮಂದಿ ಹಿಂತೆಗೆದಿದ್ದಾರೆ. ಕಾರಡ್ಕ ಬ್ಲೋಕ್ ಪಂ.ನ 14 ಡಿವಿಶನ್ಗೆ 44 ಮಂದಿ ಸ್ಪರ್ಧಿಸುತ್ತಿದ್ದು, ಒಟ್ಟು ಸಲ್ಲಿಸಿದ 61 ನಾಮಪತ್ರಗಳಲ್ಲಿ 17 ಮಂದಿ ಹಿಂತೆಗೆದಿದ್ದಾರೆ. ಕಾಞಂಗಾಡ್ ಬ್ಲೋಕ್ನ 15 ಡಿವಿಶನ್ಗೆ 43 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 63 ಮಂದಿ ನಾಮಪತ್ರ ಸಲ್ಲಿಸಿದವರಲ್ಲಿ 20 ಮಂದಿ ಹಿಂತೆಗೆದಿದ್ದಾರೆ.
ಪರಪ್ಪ ಬ್ಲೋಕ್ನ 15 ಡಿವಿಶನ್ಗಳಿಗೆ 46 ಮಂದಿ ಸ್ಪರ್ಧಿಸುತ್ತಿದ್ದು, 88 ಮಂದಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 42 ಮಂದಿ ಹಿಂತೆಗೆದಿದ್ದಾರೆ. ನೀಲೇಶ್ವರ ಬ್ಲೋಕ್ನ 14 ಡಿವಿಶನ್ಗಳಿಗೆ 40 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 65 ಮಂದಿ ನಾಮಪತ್ರ ಸಲ್ಲಿಸಿದ್ದರು, ಇವರಲ್ಲಿ 25 ಮಂದಿ ಹಿಂತೆಗೆದಿದ್ದಾರೆ. ಕಾಞಂಗಾಡ್ ನಗರಸಭೆಯ 47 ವಾರ್ಡ್ಗಳಿಗೆ 139 ಸ್ಪರ್ಧಾಳುಗಳು ಕಣದಲ್ಲಿದ್ದು, 231 ಮಂದಿ ನಾಮಪತ್ರ ಸಲ್ಲಿಸಿರುವುದರಲ್ಲಿ 92 ಮಂದಿ ಹಿಂತೆಗೆದಿದ್ದಾರೆ. ನೀಲೇಶ್ವರ ನಗರಸಭೆಯಲ್ಲಿ 34 ವಾರ್ಡ್ಗಳಿಗೆ 94 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. 135 ಮಂದಿ ನಾಮಪತ್ರ ಸಲ್ಲಿಸಿದ್ದು, 41 ಮಂದಿ ಹಿಂತೆಗೆದಿದ್ದಾರೆ.
ಕಾಸರಗೋಡು ನಗರಸಭೆಯ 39 ವಾರ್ಡ್ಗಳಿಗೆ 107 ಮಂದಿ ಸ್ಪರ್ಧಾಕಣದಲ್ಲಿದ್ದು, 162 ಮಂದಿ ನಾಮಪತ್ರ ಸಲ್ಲಿಸಿದ್ದರು. ಆದರೆ 52 ಮಂದಿ ಹಿಂತೆಗೆದಿದ್ದಾರೆ.






