ಬೆದರಿಕೆಯೊಡ್ಡಿ ಚುನಾವಣೆಯಲ್ಲಿ ಜಯಗಳಿಸಲು ಸಿಪಿಎಂ ಯತ್ನ- ಎಂ.ಎಲ್. ಅಶ್ವಿನಿ

ಕಾಸರಗೋಡು: ಬೆದರಿಕೆಯೊಡ್ಡಿ ಚುನಾವಣೆಯಲ್ಲಿ ಜಯಗಳಿಸಲು ಸಿಪಿಎಂ ಯತ್ನಿಸುತ್ತಿದೆ ಎಂದು ಆದರೆ ಅಭಿವೃದ್ಧಿಯ ಭರವಸೆ ನೀಡಿ ಬಿಜೆಪಿ ಜನರನ್ನು ಸಮೀಪಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಡಿಕೈ, ಬೇಡಡ್ಕ ಮೊದಲಾದ ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳಿಗೆ ಬೆದರಿಕೆಯೊಡ್ಡಿ ಹಿಂಜರಿಸಲು ಸಾಧ್ಯವಾಗದ ಕಾರಣ ಅವರನ್ನು ನಿರ್ದೇಶಿಸಿದ ವ್ಯಕ್ತಿಗಳಿಗೆ ಸಿಪಿಎಂ ಬೆದರಿಕೆಯೊಡ್ಡುತ್ತಿದೆ. ಈ ಬೆದರಿಕೆಯನ್ನು ಹಿಮ್ಮೆಟ್ಟಿಸಿ ವಿರೋಧ ಪಕ್ಷ ಕೂಡಾ ಇಲ್ಲದ ಬೇಡಡ್ಕ ಪಂಚಾಯತ್‌ನಲ್ಲಿ ಇತಿಹಾಸದಲ್ಲೇ ಪ್ರಥಮವಾಗಿ ಎಲ್ಲಾ ವಾರ್ಡ್‌ಗಳಲ್ಲೂ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡಲಿದೆ ಎಂದರು. ಪಿಣರಾಯಿ ವಿಜಯನ್‌ರ ಭ್ರಷ್ಟಾಚಾರ ಆಡಳಿತ, ಮೋದಿಯವರ ಅಭಿವೃದ್ಧಿಪರ ಆಡಳಿತ ಸ್ಥಳೀಯಾಡಳಿತ ಚುನಾವಣೆ ಯಲ್ಲಿ ಜನರು ಚರ್ಚಿಸುವರೆಂದು ಅವರು ನುಡಿದರು. ಶಬರಿಮಲೆ ವಿಷಯ ಸಹಿತ ಪಿಣರಾಯಿ ವಿಜಯನ್ ಸರಕಾ ರದ ವಿರುದ್ಧ ಜನರು ರೋಷ ಹೊಂದಿರು ವುದಾಗಿಯೂ ಅಶ್ವಿನಿ ಅಭಿಪ್ರಾಯ ಪಟ್ಟರು. ಬಿಜೆಪಿ ಬೇಡಡ್ಕ ಪಂ. ಅಧ್ಯಕ್ಷ ಉದಯನ್ ಚೆಂಬಕ್ಕಾಡ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲತ್, ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ, ಮಂಡಲ ಕಾರ್ಯದರ್ಶಿ ರತೀಶ್ ಕೆ, ಪಂಚಾಯತ್ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ಕರಿಪ್ಪಾಡಗಂ ಮಾತನಾಡಿದರು.

You cannot copy contents of this page