ಕೌಟುಂಬಿಕ ಸಮಸ್ಯೆ: ಸಹೋದರನನ್ನು ಇರಿದು ಕೊಲೆಗೈದ ಅಣ್ಣ

ಮಲಪ್ಪುರಂ:  ಕೌಟುಂಬಿಕ ವಿವಾದದಿಂದ  ಸಹೋದರನೋರ್ವ ತಮ್ಮನನ್ನು ಇರಿದು ಕೊಲೆಗೈದ ಘಟನೆ ಪೂಕೋಟೂರು ಪಳ್ಳಿಮುಖ್ ಎಂಬಲ್ಲಿ ನಡೆದಿದೆ. ಇಲ್ಲಿನ ಅಮೀರ್ (26) ಸಾವಿಗೀಡಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಸಹೋದರ ಜುನೈದ್ (28)ನನ್ನು ಮಂಜೇರಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇಂದು ಮುಂಜಾನೆ 5 ಗಂಟೆ ವೇಳೆ ಈ ಭೀಕರ ಕೊಲೆಕೃತ್ಯ ನಡೆದಿದೆ. ಮನೆಯಲ್ಲಿ ಇವರಿಬ್ಬರು ಮಾತ್ರವೇ ಇದ್ದರು. ಇವರ ಮಧ್ಯೆ ವಾಗ್ವಾದವುಂಟಾಗಿದ್ದು, ಈ ಮಧ್ಯೆ  ಜುನೈದ್ ಚಾಕುವಿನಿಂದ ಇರಿದು ಅಮೀರ್‌ನನ್ನು ಕೊಲೆಗೈದಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಆರ್ಥಿಕ ಸಮಸ್ಯೆಗಳು ವಾಗ್ವಾದಕ್ಕೆ ಹಾಗೂ ಕೊಲೆಗೆ ಕಾರ ಣವಾಗಿದೆಯೆಂದು  ಹೇಳಲಾಗುತ್ತಿದೆ. ಕೊಲೆಯ ಬಳಿಕ ಜುನೈದ್ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.

You cannot copy contents of this page