ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ಸೋಂಕಾಲು-ಪ್ರತಾಪನಗರ ರಸ್ತೆ ಹದಗೆಟ್ಟು ಶೋಚನಿ ಯಾವಸ್ಥೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ಹೊಂಡ ಗಳಲ್ಲಿ ಮಳೆ ನೀರು ಸಂಗ್ರಹಗೊಳ್ಳುವು ದರಿಂದ ಸಂಚಾರದ ವೇಳೆ ದ್ವಿಚಕ್ರ, ತ್ರಿಚಕ್ರ ವಾಹನಗಳು ಹೊಂಡದಲ್ಲಿ ಸಿಲುಕಿ ಹಾನಿಗೀಡಾಗುತ್ತಿರುವ ಬಗ್ಗೆ ದೂರಲಾಗುತ್ತಿದೆ. ಶಿಶು ಮಂದಿರ ಹಾಗೂ ಬೀಟಿಗದ್ದೆ ಪರಿಸರದಲ್ಲಿ ಶೋಚನೀಯವಸ್ಥೆಗೆ ತಲುಪಿದ ರಸ್ತೆಯಲ್ಲಿ ಒಂದೂವರೆ ತಿಂಗಳ ಹಿಂದೆ ಜಲ್ಲಿಕಲ್ಲುಗಳನ್ನು ತಂದು ಹಾಸಿ ದ್ದಾರೆ. ಆದರೆ ಅದನ್ನು ಸಮತಟ್ಟು, ಡಾಮಾರೀಕರಣ ನಡೆಸಲಿಲ್ಲ. ಇದರಿಂದ ಜಲ್ಲಿ ಕಲ್ಲು ಎದ್ದು ವಾಹನ ಸಂಚಾರಕ್ಕೆ ಹಾಗೂ ಊರವರು ನಡೆದಾಡಲು ಸಂಕಷ್ಟ ಅನುಭವಿ ಸುತ್ತಿದ್ದಾರೆ. ಅಲ್ಲದೆ ವಾಹನ ಸಂಚಾ ರದ ವೇಳೆ ಜಲ್ಲಿಕಲ್ಲು ಪಾದಚಾರಿಗಳ ಮೇಲೆ ಎಸೆಯಲ್ಪಡುತ್ತಿರುವುದಾಗಿ ಆರೋಪಿಸಲಾಗಿದೆ. ಜಲ್ಲಿಕಲ್ಲು ಗಳನ್ನು ಬದಿಗೆ ಸರಿಸಿ ವಾಹನ ಸಂಚಾರ ನಡೆಸಬೇಕಾದ ಅವಸ್ಥೆ ಉಂಟಾಗಿದೆ. ಸೋಂಕಾಲಿನಿAದ ಪ್ರತಾಪನಗರ ದಾರಿಯಾಗಿ ಶಾಂತಿಗುರಿಯಿAದ ಹೆದ್ದಾರಿಗೆ ಸಂಗಮಿಸುವ ಈ ರಸ್ತೆಯಲ್ಲಿ ಶಾಲಾ ವಾಹನ ಸಹಿತ ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿವೆ. ಈ ರಸ್ತೆಯನ್ನು ದುರಸ್ತಿಗೊಳಿಸಲು ಊರವರು ಆಗ್ರಹಿಸಿದ್ದಾರೆ.






