ಕುಬಣೂರು ನಿವಾಸಿ ಸಹಿತ ಮೂವರು ವಾಹನ ಕಳವು ತಂಡದ ಸೆರೆ: ತನಿಖೆ ಕಾಸರಗೋಡಿಗೆ

ಕಾಸರಗೋಡು: ಕುಬಣೂರು ಹಾಗೂ ಚೆರ್ವತ್ತೂರು ನಿವಾಸಿಗಳು ಸಹಿತ ಮೂವರು ಅಂತಾರಾಜ್ಯ ವಾಹನ ಕಳ್ಳರು ಎರ್ನಾಕುಳಂನಲ್ಲಿ ಸೆರೆಗೀಡಾಗಿದ್ದು, ಈ ಸಂಬಂಧ ತನಿಖೆಯನ್ನು ಕಾಸರಗೋಡಿಗೆ ವಿಸ್ತರಿ ಸಲಾಗಿದೆ.  ಬೇಕೂರು ಕುಬಣೂರಿನ ಕೆ.ಪಿ. ಅಬೂಬಕ್ಕರ್ ಸಿದ್ದಿಕ್ (41), ಚೆರ್ವತ್ತೂರು ಕೋರಪರಂಬಿಲ್‌ನ ಸಿದ್ದಿಕ್ (48), ಕಣ್ಣೂರು ಮಾಡಾಯಿ ಕಿನಾಕುಳಿಲ್ ಶಾಜಿದ್ ಯಾನೆ ಸೋಡಾಬಾಬು (47)ಎಂಬಿವರನ್ನು ಪನಂಗಾಡ್ ಪೊಲೀಸ್ ಇನ್‌ಸ್ಪೆಕ್ಟರ್ ವಿಪಿನ್‌ದಾಸ್ ಬಂಧಿಸಿದ್ದರು. ಸಿದ್ದಿಕ್ ವಿರುದ್ದ ಕೇರಳ ಹಾಗೂ ತಮಿಳುನಾಡಿನ ಮೇಟುಪಾಳಯಂ, ನಾಮಕ್ಕಲ್ ಎಂಬಿಡೆಗಳಲ್ಲಿ ದರೋಡೆ ಸಹಿತ 25 ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಬೂಬ ಕ್ಕರ್ ಸಿದ್ದಿಕ್ ವಿರುದ್ಧ ಮಾದಕವಸ್ತು   ಹಾಗೂ ಶ್ರೀಗಂಧ ಸಾಗಾಟ  ಪ್ರಕರಣ,ಸಾಜಿದ್ ವಿರುದ್ಧ  ವಾಹನ ಕಳವು ಮೊದಲಾದ ಕೇಸುಗಳಿವೆ ಯೆಂದು ಪೊಲೀಸರು ತಿಳಿಸಿದ್ದಾರೆ.  ಕೊಚ್ಚಿಯಿಂದ ಕಳವುಗೈದ ಕಾರನ್ನು ಆರೋಪಿಗಳು ಕೇರಳ-ಕರ್ನಾಟಕ ಗಡಿಪ್ರದೇಶದಲ್ಲಿ ಮಾರಾಟಗೈದಿ ರುವುದಾಗಿ ತನಿಖೆಯಲ್ಲಿ ತಿಳಿದುಬಂ ದಿದೆ.  ಈ  ಕಾರನ್ನು ಖರೀದಿಸಿದ ವ್ಯಕ್ತಿಯ ಕುರಿತು ಸೂಚನೆ ಲಭಿಸಿದ್ದು ಆತನನ್ನು ಪತ್ತೆಹಚ್ಚಲು ಪೊಲೀಸರು ಕಾಸರಗೋಡಿಗೆ  ಆಗಮಿಸಲಿ ದ್ದಾರೆಂದು ತಿಳಿದುಬಂದಿದೆ.

You cannot copy contents of this page