ಸಂಚರಿಸುತ್ತಿದ್ದ ಲಾರಿ ಬೆಂಕಿಗಾಹುತಿ ಚಾಲಕ ಅಪಾಯದಿಂದ ಪಾರು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮೀನು ಲಾರಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಪೆರಿಯಾ ಕೇರಳ ಕೇಂದ್ರ ವಿಶ್ವವಿದ್ಯಾಲಯ ಸಮೀಪ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಕಾಞಂಗಾಡ್‌ನಿಂದ  ಎರಡು ಘಟಕ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದೆ. ಪೊನ್ನಾನಿಯಿಂದ ಮಂಗಳೂರು ಭಾಗಕ್ಕೆ ಮೀನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂ ಡಿದೆ.   ಲಾರಿಗೆ ಬೆಂಕಿ ಹತ್ತಿಕೊಂಡಿರು ವುದನ್ನು ಕಂಡ ಚಾಲಕ ಕರ್ನಾಟಕದ ಕುಂದಾಪುರ ನಿವಾಸಿ ಮುಹಸಿನ್ ಕೂಡಲೇ ಲಾರಿಯನ್ನು ನಿಲ್ಲಿಸಿ ಹೊರಗಿಳಿದು ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾನೆ. ಇಂಜಿನ್ ಬಿಸಿಯಾ ದುದರಿಂದ ಬೆಂಕಿ ಹತ್ತಿಕೊಂಡಿದೆಯೆಂದು ಅಂ ದಾಜಿಸಲಾಗಿದೆ. ಲಾರಿ ಆಂಶಿಕ ಉರಿದು ಹಾನಿಗೊಂಡಿದೆ.

You cannot copy contents of this page