ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಆರಂಭ

ಕಾಸರಗೋಡು: ಛಾಯಾಗ್ರಹಣ ವಲಯದಲ್ಲಿ ಕೆಲಸ ಮಾಡುವವರ ಅತ್ಯಂತ ದೊಡ್ಡ ಸಂಘಟನೆಯಾದ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ೪೧ನೇ ಜಿಲ್ಲಾ ಸಮ್ಮೇಳನ ಕಾಞಂಗಾಡ್ ವ್ಯಾಪಾರ ಭವನದಲ್ಲಿ ಆರಂಭಗೊಂಡಿತು. ನಿಧನ ಹೊಂದಿದ ಫೊಟೋ ಗ್ರಾಫರ್‌ಗಳಾದ ವಿನೋದ್, ಚಿದಾನಂದ ಅರಿಬೈಲು ಎಂಬಿವರ ಸ್ಮರಣಾರ್ಥವಿರುವ ನಗರದಲ್ಲಿ ಎರಡು ದಿನಗಳಲ್ಲಾಗಿ ಸಮ್ಮೇಳನ ನಡೆಯಲಿದೆ. ನಿನ್ನೆ  ಬೆಳಿಗ್ಗೆ ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಧ್ವಜಾರೋಹಣಗೈದರು. ಬಳಿಕ ಟ್ರೇಡ್ ಫೇರ್‌ನ್ನು ರಾಜ್ಯಾಧ್ಯಕ್ಷ ಎ.ಸಿ. ಜೋನ್ಸನ್ ಉದ್ಘಾಟಿಸಿದರು. ರಾಜ್ಯ ಕೋಶಾಧಿಕಾರಿ ಉಣ್ಣಿ ಕೂವೋಡು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷ ಸಜೀಶ್ ಮಣಿ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು. ಕೃಷಿಮೇಳ, ಕ್ಷೇಮನಿಧಿ ಶಿಬಿರವನ್ನು ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಉದ್ಘಾಟಿಸಿದರು. ಬಳಿಕ ಕಾಞಂಗಾಡ್ ನಗರದಲ್ಲಿ ಮೆರವಣಿಗೆ ನಡೆಯಿತು.

ಸಾರ್ವಜನಿಕ ಸಮ್ಮೇಳನವನ್ನು ಸಾಹಿತಿ ಪಿ.ವಿ. ಶಾಜಿ ಕುಮಾರ್ ಉದ್ಘಾಟಿಸಿದರು. ಎಕೆಪಿಎ ಜಿಲ್ಲಾ ಅಧ್ಯಕ್ಷ ಟಿ.ವಿ. ಸುಗುಣನ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಅಧ್ಯಕ್ಷ ಎ.ಸಿ. ಜೋನ್ಸನ್ ಪ್ರಧಾನ ಭಾಷಣ ಮಾಡಿದರು. ಇದೇ ವೇಳೆ ಫೊಟೋಗ್ರಫಿ, ವೀಡಿಯೋಗ್ರಫಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಶಿಕ್ಷಣ ಬಹುಮಾನ ನೀಡಲಾಯಿತು. ಫೊಟೋಗ್ರಫಿ ಸ್ಪರ್ಧೆಯಲ್ಲಿ ಬೇಬಿ ಪ್ರಸಾದ್ ಪಾಲಕುನ್ನು ಪ್ರಥಮ ಸ್ಥಾನ, ಸಿಬಿ ವೆಳ್ಳರಿಕುಂಡ್ ದ್ವಿತೀಯ ಸ್ಥಾನ, ಗೋವಿಂದನ್ ಚಂಗರಕ್ಕಾಡ್ ತೃತೀಯ ಸ್ಥಾನ ಪಡೆದಿದ್ದು, ದಿನೇಶ್ ಇನ್‌ಸೈಟ್ ಪ್ರತ್ಯೇಕ ಪರಾಮರ್ಶೆಗೆ  ಅರ್ಹರಾದರು.

ವೀಡಿಯೋಗ್ರಫಿ ಶಾರ್ಟ್ ಫಿಲ್ಮ್ ಸ್ಪರ್ಧೆಯಲ್ಲಿ ಬಾಲಕೃಷ್ಣನ್ ಪಾಲಕ್ಕಿ ಪ್ರಥಮ, ನವೀನ್ ಕುಂಬಳೆ ದ್ವಿತೀಯ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ಉಣ್ಣಿ ಕೂವೋಡ್, ವಿ. ಅಬ್ದುಲ್ ಸಲಾಂ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಕಾಞಂಗಾಡ್ ಘಟಕಾಧ್ಯಕ್ಷ ಆಸಿಫ್ ಪಿ.ಕೆ, ಸಜೀಶ್ ಮಣಿ, ಹರೀಶ್ ಪಾಲಕುನ್ನು, ಜಿಲ್ಲಾ ಉಪಾಧ್ಯಕ್ಷರಾದ ವಿ.ವಿ. ವೇಣು, ಅನೂಪ್ ಚಂದೇರ, ಜಿಲ್ಲಾ ಜೊತೆ ಕಾರ್ಯದರ್ಶಿ ಕೆ. ಸುಧೀರ್, ಶರೀಫ್, ರಾಜೀವನ್, ವನಿತಾವಿಂಗ್ ಜಿಲ್ಲಾ ಕೋ-ಆರ್ಡಿನೇಟರ್ ರಮ್ಯಾ ರಾಜೀವನ್ ಶುಭ ಕೋರಿದರು. ಜಿಲ್ಲಾ ಕೋಶಾಧಿಕಾರಿ ಪ್ರಜಿತ್ ಎನ್.ಕೆ. ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಇಂದು ಬೆಳಿಗ್ಗೆ ಪ್ರತಿನಿಧಿ ಸಮ್ಮೇಳನ ನಡೆಯಲಿದೆ. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.

You cannot copy contents of this page