ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಜನ್ಮದಿನ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಬೆಳಿಗ್ಗೆ ಭಜನೆ ಬಳಿಕ ಸಭೆ ನಡೆಯಿತು. ಇದೇ ವೇಳೆ ತಾಲೂಕು ಜನಜಾಗೃತಿ ವೇದಿಕೆಯಿಂದ ಕೊಡುಗೆಯಾಗಿ ನೀಡಿದ ಪುಸ್ತಕವನ್ನು ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಆಶ್ರಮದ ರಮೇಶ್ ಕಳೇರಿಯವರಿಗೆ ಹಸ್ತಾಂತರಿಸಿದರು. ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಕಾರಡ್ಕ ವಲಯ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಧ.ಗ್ರಾ. ಜಿಲ್ಲಾ ಯೋಜನಾಧಿಕಾರಿ ದಿನೇಶ್, ಚನಿಯಪ್ಪ ನಾಯ್ಕ, ಪ್ರೊ. ಎ. ಶ್ರೀನಾಥ್, ತಾರನಾಥ ರೈ, ಅಶ್ವಿನಿ, ಆಶ್ರಮದ ಸೇವಾಕರ್ತರಾದ ಹರೀಶ್, ಭಾರತಿ, ಜಯರಾಮ, ಪ್ರಫುಲ್ಲ, ಸುನಿತಾ, ಜಲಜಾಕ್ಷಿ, ಬೇಬಿ, ನಳಿನಾಕ್ಷಿ, ಜ್ಯೋತಿ, ಅನಿತ ಉಪಸ್ಥಿತರಿದ್ದರು. ಶಶಿಕಲ ಸ್ವಾಗತಿಸಿ, ಸುಗುಣ ವಂದಿಸಿದರು. ಕಲಾವಿದ ವಸಂತ ಬಾರಡ್ಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಆಶ್ರಮ ನಿವಾಸಿ ಸುಧಾ ಸಿದ್ಧಪಡಿಸಿದ ಶುಭಾಶಯ ಪತ್ರವನ್ನು ಯೋಜನಾಧಿಕಾರಿ ದಿನೇಶ್ರಿಗೆ ಹಸ್ತಾಂತರಿಸಿದರು. ೭೮ನೇ ಹುಟ್ಟುಹಬ್ಬದ ನೆನಪಿಗಾಗಿ ಕಲ್ಪವೃಕ್ಷವನ್ನು ಆಶ್ರಮ ವಠಾರದಲ್ಲಿ ನೆಡಲಾಯಿತು. ಗೋವುಗಳಿಗೆ ಗೋಗ್ರಾಸ, ಆಶ್ರಮ ನಿವಾಸಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಭಜನಾ ಸೇವೆ ನಡೆಸಿದವರಿಗೆ ಆಶ್ರಮದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು






