ಪಿಣರಾಯಿ ವಿಜಯನ್ ಸರಕಾರ ಸ್ಥಳೀಯಾಡಳಿತ ಸಂಸ್ಥೆಗಳ ಕತ್ತು ಹಿಚುಕುತ್ತಿದೆ- ಎಂ.ಎಲ್. ಅಶ್ವಿನಿ

ಕುಂಬಳೆ: ತೀವ್ರ ಆರ್ಥಿಕ ಸಂದಿಗ್ಧತೆಯನ್ನು ಹಿಮ್ಮೆಟ್ಟಿಸಲು ಸ್ಥಳೀಯಾಡಳಿತ ಸಂಸ್ಥೆಗಳ ನಿಧಿಯನ್ನು ಕಡಿತಗೊಳಿಸಿದ ಪಿಣರಾಯಿ ಸರಕಾರದ ಕ್ರಮ ಸ್ಥಳೀಯಾಡಳಿತ ಸಂಸ್ಥೆಗಳನ್ನು ಆರ್ಥಿಕವಾಗಿ ಹಿಚುಕುತ್ತಿದೆ,  ತ್ರಿಸ್ತರ ಪಂಚಾಯತ್‌ಗಳ ಚಟುವಟಿಗಳ ತಾಳ ತಪ್ಪಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು.

ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಯೋಜಿಸಿದ ಜನ ಪಂಚಾ ಯತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೊರೋನಾ ಸಮಯದಲ್ಲಿ ಕೆಲಸ ಕಳೆದು ಕೊಂಡು ಹಿಂತಿರುಗಿದ  ಅನಿವಾಸಿಗಳಿಗೆ ಆರು ತಿಂಗಳ ವೇತನ ನೀಡುವುದಾಗಿ ತಿಳಿಸಿ ವಂಚಿಸಿದ ಪಿಣರಾಯಿ ಸರಕಾರ ನವಕೇರಳ ಸದಸ್‌ಗೆ ಹಾಗೂ ಲೋಕ ಕೇರಳ ಸಭೆಗೆ ವೆಚ್ಚ ಮಾಡಿರುವುದು ಕೋಟ್ಯಂತರ ರೂಪಾಯಿಗಳಾಗಿದೆ ಎಂದು ಅವರು ದೂರಿದರು. ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಪಿಂಚಣಿ ವಿತರಿಸಿದ್ದು ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿರುವುದೆಂದು ಅವರು ನುಡಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಮುರಳೀಧರ ಯಾದವ್, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್  ಸುಕುಮಾರ ಕುದ್ರೆಪ್ಪಾಡಿ, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಕುಂಬಳೆ ಪಂ. ಸೌತ್ ಏರಿಯಾ ಸಮಿತಿ ಅಧ್ಯಕ್ಷ ಸುಜಿತ್ ರೈ, ಶಿವಪ್ರಸಾದ್ ರೈ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಎಸ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ, ಮಂಡಲ ಅಧ್ಯಕ್ಷ ಮಹೇಶ್, ಮಂಡಲ ಉಪಾಧ್ಯಕ್ಷೆ ಪ್ರೇಮಾವತಿ ಭಾಗವಹಿಸಿದರು. ಇದೇ ವೇಳೆ ಕುಂಬಳೆ ಪಂ. ಸಮಿತಿ ಸಿದ್ಧಪಡಿಸಿದ ಪ್ರಣಾಳಿಕೆಯ ಬಿಡುಗಡೆಯನ್ನು ಅಧ್ಯಕ್ಷೆ ಅಶ್ವಿನಿ ಎಂ.ಎಲ್. ನಿರ್ವಹಿಸಿದರು.

You cannot copy contents of this page