ಕೆರೆಗೆ ಬಿದ್ದ ಚಿರತೆ ಗಂಡು: ಹೆಸರು ‘ಕಾಸ್ಟ್ರೋ’ ಇನ್ನು ತೃಶೂರು ಮೃಗಾಲಯದಲ್ಲಿ ವಾಸ

ಕಾಸರಗೋಡು:  ಪುಲ್ಲೂರು ಕೊಡವಲದಲ್ಲಿ ಕೆರೆಗೆ ಬಿದ್ದು ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ  ಚಿರತೆ ಗಂಡು ಎಂದು ಇದೀಗ ಗುರುತಿಸಲಾಗಿದೆ.  ಈ ಚಿರತೆಗೆ ಅರಣ್ಯ ಪಾಲಕರು ‘ಕಾಸ್ಟ್ರೋ’ ಎಂಬ ಹೆಸರಿಟ್ಟಿ ದ್ದಾರೆ. ಈ ಚಿರv ಯನ್ನು ನಿನ್ನೆ ರಾತ್ರಿ 10.30ರ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೆಂಗಾವಲಿನೊಂದಿಗೆ ವಿಶೇಷ ವಾಹನದಲ್ಲಿ ತೃಶೂರು ಮೃಗಾಲಯಕ್ಕೆ ಸಾಗಿಸಲಾಯಿತು. ಕಳೆದ ಭಾನುವಾರ ರಾತ್ರಿ ಪುಲ್ಲೂರು ಕೊಡವಲ ನೀರಳಂ ಕಯದ ಮಧು ಎಂಬವರ ಹಿತ್ತಿಲ ಕೆರೆಯಲ್ಲಿ ಚಿರತೆ ಬಿದ್ದಿತ್ತು.  ನಂತರ ಅರಣ್ಯ ಇಲಾಖೆಯವರು ಅದನ್ನು ಕೆರೆಯಿಂದ ಮೇಲಕ್ಕೆತ್ತಿ ಹೊಸದುರ್ಗ ರೇಂಜ್ ಅರಣ್ಯ ಕಚೇರಿಗೆ  ತಲುಪಿಸಿ ಶುಶ್ರೂಷೆ ನೀಡಿದ್ದರು. ನಿನ್ನೆಯ ತನಕ ಅಲ್ಲೇ ಬೋನಿನಲ್ಲಿದ್ದ ಚಿರತೆಯನ್ನು ರಾತ್ರಿ ತೃಶೂರು ಮೃಗಾಲಯಕ್ಕೆ ಸಾಗಿಸ ಲಾಯಿತು.  ಚಿರತೆ ಸಂಪೂರ್ಣ ಆರೋಗ್ಯವಾಗಿದೆ. ಇದಕ್ಕೆ ಸುಮಾರು೧೬ ತಿಂಗಳು ಪ್ರಾಯ ಅಂದಾಜಿಸಲಾಗಿದೆ ಯೆಂದು ಅರಣ್ಯ ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ. ಈ ಚಿರತೆಗೆ ಜೊತೆಗಾರನಾಗಿ  ಕಳೆದ ಮಾರ್ಚ್ 23ರಂದು ಕೊಳತ್ತೂರು ನಿಡವೋಟ್‌ನ ಜನಾರ್ದನನ್‌ರ ತೋಟದಿಂದ ಅರಣ್ಯ ಇಲಾಖೆಯವರು ಸೆರೆಹಿಡಿದ ರೆಮೋ ಎಂಬ ಗಂಡು ಚಿರತೆ ಇದೇ ಮೃಗಾಲಯದಲ್ಲಿರುವುದು.

You cannot copy contents of this page