ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನ ದಲ್ಲಿ ನೀಡುತ್ತಿರುವ ಅನ್ನ ಸಂತರ್ಪಣೆಯ ಭಕ್ಷ್ಯದಲ್ಲಿ ಬದಲಾವಣೆ ಮಾಡಲು ಚಿಂತಿಸಲಾಗಿದೆ. ಭಕ್ತರಿಗೆ ಕೇರಳೀಯ ರೀತಿಯ ಆಹಾರ ನೀಡಲಾಗುವುದು. ಹಪ್ಪಳ, ಪಾಯಸ ಸಹಿತದ ಭೋಜನ ನೀಡಲಾಗುವುದೆಂದು ತಿರುವಾಂಕೂರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ. ಜಯಕುಮಾರ್ ನುಡಿದರು. ನಾಳೆ ಅಥವಾ ನಾಡಿದ್ದು ಈ ರೀತಿಯ ಆಹಾರ ಪದಾರ್ಥಗಳನ್ನು ಜ್ಯಾರಿಗೊಳಿಸಲಾಗುವುದೆಂದು ಅವರು ನುಡಿದರು. ಇದೇ ವೇಳೆ ಭಕ್ತರ ಸಂದಣಿ ಶಬರಿಮಲೆಯಲ್ಲಿ ನಿಯಂತ್ರಣವಿದೇಯವಾಗಿದೆ. ಶಬರಿಮಲೆಯ ವಿಷಯದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಅವಲೋಕನ ನಡೆಸಲಾಗಿದೆ. ಎರುಮೇಲಿಯಲ್ಲಿ ಸ್ಪೋಟ್ ಬುಕ್ಕಿಂಗ್ ನೀಡಲು ತೀರ್ಮಾ ನಿಸಲಾಗಿದೆ. ಅರವಣ ಪ್ರಸಾದ ಅಗತ್ಯಕ್ಕೆ ಸಂಗ್ರಹವಿದೆ. ಯಾವುದರಲ್ಲೂ ಆತಂಕವಿಲ್ಲವೆಂದು ಬೋರ್ಡ್ ಅಧ್ಯಕ್ಷರು ತಿಳಿಸಿದ್ದಾರೆ. ಪಂದಳಂನಲ್ಲಿ ನೀಡುತ್ತಿರುವ ಅನ್ನ ಸಂತರ್ಪಣೆಯನ್ನು ಉತ್ತಮಪಡಿಸಲಾಗುವುದು. ಶಬರಿಮಲೆಗೆ ಬರುವ ಭಕ್ತರ ಸೌಕರ್ಯ ಹೆಚ್ಚಿಸಲು ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ. ಡಿಸೆಂಬರ್ ೧೮ರಂದು ಇನ್ನೊಮ್ಮೆ ಸಭೆ ಸೇರಿ ಆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕೆ. ಜಯಕುಮಾರ್ ಸ್ಪಷ್ಟಪಡಿಸಿದರು.





