ಕಾಸರಗೋಡು: ಕಾಸರ ಗೋಡು ಸಬ್ ಜೈಲಿನಲ್ಲಿದ್ದ ರಿಮಾಂಡ್ ಆರೋಪಿ ಮೃತಪಟ್ಟ ಘಟನೆ ನಡೆದಿದೆ. ದೇಳಿ ಕುನ್ನುಪ್ಪಾರದ ದಿ| ಅಬ್ದುಲ್ಲ ಎಂಬವರ ಪುತ್ರ ಮುಬಶೀರ್ (29) ಮೃತಪಟ್ಟ ವ್ಯಕ್ತಿ. ಶಾರೀರಿಕ ಅಸೌಖ್ಯದ ಹಿನ್ನೆಲೆಯಲ್ಲಿ ಇಂದು ಮುಂಜಾನೆ 5.30ರ ವೇಳೆ ಮುಬಶೀರ್‌ನನ್ನು ಜೈಲು ಅಧಿಕಾರಿಗಳು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು. ಅಷ್ಟರೊಳಗೆ ಸಾವು ಸಂಭವಿಸಿದೆಯೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ.
ಗಲ್ಫ್‌ನಲ್ಲಿದ್ದ ಮುಬಶೀರ್ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿ ಬಂದಿದ್ದರ. ಮೂರು ವಾರಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ವಾರಂಟ್ ಇರುವುದಾಗಿ ತಿಳಿಸಿ ಪೊಲೀಸರು ಮುಬಶೀರ್‌ನನ್ನು ಬಂಧಿಸಿರು ವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಅನಂತರ ಆತನಿಗೆ ನ್ಯಾಯಾ ಲಯ ರಿಮಾಂಡ್ ವಿಧಿಸಿ ಕಾಸರಗೋಡು ಸಬ್ ಜೈಲಿಗೆ ಕಳುಹಿಸಲಾಗಿತ್ತು.
ಸಾವಿನಲ್ಲಿ ಸಂಶಯವಿರುವು ದಾಗಿಯೂ ಕುಟುಂಬ ಆರೋ ಪಿಸಿದೆ. ನಿನ್ನೆ ತಾಯಿ ಹಾಗೂ ಎರಡು ದಿನಗಳ ಹಿಂದೆ ಗಲ್ಫ್‌ನಿಂದ ಬಂದ ಸಹೋದರ ಸಬ್ ಜೈಲಿಗೆ ತಲುಪಿ ಮುಬಶೀರ್‌ರನ್ನು ಭೇಟಿಯಾಗಿದ್ದರು. ಈ ವೇಳೆ ಯಾವುದೇ ಆರೋಗ್ಯ ಸಮಸ್ಯೆಗಳು ಇರುವುದಾಗಿ ಮುಬಶೀರ್ ತಿಳಿಸಿರಲಿಲ್ಲವೆಂದು ಕುಟುಂಬ ಹೇಳುತ್ತಿದೆ. ಆದ್ದರಿಂದ ತಜ್ಞ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಕುಟುಂಬ ಒತ್ತಾಯಿಸಿದೆ. ಇದೇ ವೇಳೆ ಮುಬಶೀರ್‌ರ ಸಾವಿಗೆ ಸಂಬಂಧಿಸಿ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತರ ತಾಯಿ ಹಾಜಿರ, ಸಹೋದರರಾದ ಮುನವ್ವರ್, ಮುಸಂಬಿಲ್, ಸಲ್ಮಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





