ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಿರುವ ಚುನಾವಣೆಗೆ ಸಂಬಂಧಿಸಿ ವಿವಿಧ ಮುದ್ರಣ ಸಂಸ್ಥೆಗಳಿಗೆ ಜಿಲ್ಲಾ ಎನ್‌ಫೋರ್ಸ್ ಮೆಂಟ್ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದೆ. ಅನಧಿಕೃತವಾಗಿ ಸಂಗ್ರಹಿಸಿಟ್ಟ ಮೆಟೀರಿಯಲ್‌ಗಳನ್ನು ಪತ್ತೆಹಚ್ಚಿ ಸಂಸ್ಥೆಯ ಮಾಲಕರಿಗೆ ದಂಡ ಹೇರಲಾಗಿದೆ. ಮುದ್ರಣ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗಾಗಿ, ಅಭ್ಯರ್ಥಿಗಳಿಗಾಗಿ ಮುದ್ರಿಸಿ ಇರಿಸಿದ್ದ ನಿಷೇಧಿತ ಪಿವಿಸಿ ಫ್ಲೆಕ್ಸ್ ಬ್ಯಾನರ್‌ಗಳನ್ನು, ಮೆಟೀರಿಯಲ್‌ಗಳನ್ನು ವಶಪಡಿಸಿ ಸಂಸ್ಥೆಯ ಮಾಲಕನಿಗೆ ೨೫,೦೦೦ ರೂ. ದಂಡ ಹೇರಲಾಗಿದೆ. ಮುದ್ರಣಕ್ಕೆ ಅನುಮತಿ ನೀಡಿದ ವಸ್ತುಗಳಲ್ಲಿಯೂ ಕ್ಯೂಆರ್ ಕೋಡ್, ರೀಸೈಕ್ಲಿಂಗ್ ಲೋಗೊ, ಸಂಸ್ಥೆಯ ವಿಳಾಸ ಮುದ್ರಿಸಲಾಗಿರಲಿಲ್ಲ. ಗಡಿ ಪ್ರದೇಶವಾದ ಕಾರಣ ಮಂಗಳೂರಿನಿಂದ ನಿಷೇಧಿತ ಫ್ಲೆಕ್ಸ್ ಮೆಟೀರಿಯಲ್‌ಗಳು, ಪ್ರಚಾರ ಬೋರ್ಡ್‌ಗಳು ಅನಧಿಕೃತವಾಗಿ ತರಲಾಗುತ್ತಿದೆ ಎಂಬ ವರದಿಯ ಆಧಾರದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ತಂಡದಲ್ಲಿ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಸದಸ್ಯರಾದ ಟಿ.ಸಿ. ಶೈಲೇಶ್, ಜೋಸ್ ವಿ.ಎಂ, ಆದರ್ಶ್ ಎನ್. ಭಾಗವಹಿಸಿದರು.







