ಕಾಸರಗೋಡು: ರಾಷ್ಟ್ರೀಯ ಕ್ಷೀರದಿನದಂಗವಾಗಿ ಮಿಲ್ಮಾದ ಕಾಸರ ಗೋಡು ಡೈರಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಯಿತು. ಚೆಂಗಳ ಪಂಚಾಯತ್ನ ಕುಟುಂಬಶ್ರೀ ಸದಸ್ಯರಿಗೆ ಹಾಗೂ ಚಾಯೋತ್ ಜಿಎಚ್ಎಸ್ಎಸ್ನ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ, ಮಂಗಲ್ಪಾಡಿ ಪಂಚಾಯತ್ನ ಸಿಡಿಎಸ್ ಸದಸ್ಯರಿಗೆ ತಿಳುವಳಿಕೆ ತರಗತಿ ಹಮ್ಮಿಕೊಳ್ಳಲಾಯಿತು. ಡೈರಿ ಮೆನೇಜರ್ ಸ್ವೀಟಿ ವರ್ಗೀಸ್ ಉದ್ಘಾಟಿಸಿದರು. ಜಿಲ್ಲೆಯ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಜಲ ಛಾಯೆ ಸ್ಪರ್ಧೆಯಲ್ಲಿ ಎಂ. ಸ್ವಪ್ನಾ ಸುರೇಶ್ (ಬೇತೂರುಪಾರ ಶಾಲೆ), ವರುಣ ಮೋಹನ್ (ಚಟ್ಟಂಚಾಲ್ ಶಾಲೆ), ಕೆ. ದೇವಾನಂದ (ಉದುಮ ಶಾಲೆ) ಎಂಬಿವರು ಯಥಾ ಕ್ರಮ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು. ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ನಡೆಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಇ. ತನವ್, ಇ. ತೇಜಸ್ (ಪಾಕಂ ಶಾಲೆ), ಟಿ.ವಿ. ಅಗ್ರಿಮ, ಕೆ. ಅನನ್ಯ (ಉದಿನೂರು ಶಾಲೆ), ಶ್ರೀಲಕ್ಷ್ಮಿ, ಅಶ್ವಿನ್ರಾಜ್ (ರಾಜಾಸ್ ನೀಲೇಶ್ವರ) ಎಂಬೀ ತಂಡಗಳು ಯಥಾ ಕ್ರಮ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆಯಿತು.







