ಉಳಿಯತ್ತಡ್ಕ: ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ನ ಸಿವಿಲ್ ಸ್ಟೇಷನ್ ಡಿವಿಶನ್ನಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ಟಿ.ಬಿ. ಶಫೀಕ್ರ ಚುನಾವಣೆ ಪ್ರಚಾರ ಉಳಿಯತ್ತಡ್ಕದಲ್ಲಿ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶಾಫಿ ಪರಂಬಿಲ್ ಉದ್ಘಾಟಿಸಿದರು.
ಚೆಂಗಳ ಡಿವಿಶನ್ ವ್ಯಾಪ್ತಿಯ ಬ್ಲೋಕ್ ಪಂಚಾಯತ್, ಗ್ರಾಮ ಪಂಚಾಯತ್ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ನೀಲಕಂಠನ್, ಹಕೀಂ ಕುನ್ನಿಲ್, ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಸ್, ಯೂತ್ ಕಾಂಗ್ರೆಸ್ ಕರ್ನಾಟಕ ಮಾಜಿ ರಾಜ್ಯ ಅಧ್ಯಕ್ಷ ಹಾರಿಸ್ ನಾಲಪ್ಪಾಡ್, ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಹಾರಿಸ್, ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ರಾಜೀವನ್ ನಂಬ್ಯಾರ್, ಮುಸ್ಲಿಂ ಲೀಗ್ ಮಧೂರು ಪಂ. ಸಮಿತಿ ಅಧ್ಯಕ್ಷ ಶಂಸುದ್ದೀನ್, ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್ ಭಾಗವಹಿಸಿದರು.







