ಕುಂಬಳೆ ಪಂಚಾಯತ್‌ನಲ್ಲಿ ವಿಚಿತ್ರ ಸ್ಪರ್ಧೆ : ಶಾಂತಿಪಳ್ಳ ವಾರ್ಡ್‌ನಲ್ಲಿ ಬಿಜೆಪಿ ಡಮ್ಮಿ ಅಭ್ಯರ್ಥಿಯೂ ಕಣದಲ್ಲಿ: ಚರ್ಚೆಗೆ ಗ್ರಾಸ

ಕುಂಬಳೆ: ಸ್ಥಳೀಯಾಡಳಿತ ಪಂಚಾಯತ್ ಚುನಾವಣೆಗೆ ಇನ್ನು ಕೇವಲ 13 ದಿನಗಳು ಬಾಕಿಯಿ ರುವಂತೆ ಅಭ್ಯರ್ಥಿಗಳ ಮತಯಾಚನೆ ಪ್ರಕ್ರಿಯೆಗೆ ವೇಗ ಹೆಚ್ಚಿದೆ.  ಇದೇ ವೇಳೆ ಕೆಲವೆಡೆ ಅಭ್ಯರ್ಥಿಗಳ ಸ್ಪರ್ಧೆ ಹೆಸರಲ್ಲಿ ರಾಜಕೀಯ ಪಕ್ಷಗಳ ಕೆಸರೆ ರೆಚಾಟ ತೀವ್ರಗೊಂಡಿದೆ. ಆರೋಪ-ಪ್ರತ್ಯಾರೋ ಗಳು ಕೂಡಾ ಕೇಳಿಬರುತ್ತಿದ್ದು ಒಟ್ಟಾರೆಯಾಗಿ ಇದು ಮತದಾರರಿಗೆ ಕುತೂಹಲದ ಜತೆಗೆ ಆಶ್ಚರ್ಯ ಮೂಡಿಸಿದೆ. ಇಂತಹ ವೊಂದು ಕುತೂಹಲ ಕುಂಬಳೆ ಗ್ರಾಮ ಪಂಚಾಯತ್‌ನ 21ನೇ ವಾರ್ಡ್ ಶಾಂತಿಪಳ್ಳದಲ್ಲ್ಲಿ ಸೃಷ್ಟಿಯಾಗಿದೆ.

 ಈ ವಾರ್ಡ್‌ನಲ್ಲಿ ಒಟ್ಟು ಮೂವರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಎಡರಂಗದಿಂದ ಸಿಪಿಎಂ ಅಭ್ಯರ್ಥಿಯಾಗಿ ಸ್ನೇಹ ಕೆ, ಬಿಜೆಪಿಯಿಂದ ಪ್ರೇಮಲತ ಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಗೀತಶ್ರೀ ಜೆ.ಎ ಎಂಬಿವರು ಕಣದ ಲ್ಲಿದ್ದಾರೆ. ಯುಡಿಎಫ್‌ನಿಂದ ಇಲ್ಲಿ ಯಾರೂ ಸ್ಪರ್ಧಿಸುತ್ತಿಲ್ಲ. ಈ ವಾರ್ಡ ನ್ನು ಕಾಂಗ್ರೆಸ್‌ಗೆ ನೀಡಿದ್ದರೂ ಆ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇದೇ ವೇಳೆ ಈ ವಾರ್ಡ್‌ನಲ್ಲಿ ಸ್ಪರ್ಧಿಸುವ ಸ್ವತಂತ್ರ ಅಭ್ಯರ್ಥಿ ಗೀತಶ್ರೀ ಜೆ.ಎ ಬಿಜೆಪಿ  ಕಾರ್ಯ ಕರ್ತೆಯೂ ಆಗಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಪರವಾಗಿ ಡಮ್ಮಿಯಾಗಿ ಇವರು ನಾಮಪತ್ರ ಸಲ್ಲಿಸಿದ್ದರು. ಆದರೆ ಇವರು ಬಳಿಕ  ನಾಮಪತ್ರ ಹಿಂತೆಗೆದುಕೊಳ್ಳದಿ ರುವುದೇ  ಇವರು ಕೂಡಾ ಕಣದಲ್ಲಿರಲು ಕಾರಣವಾಗಿದೆ. ಇದರ ಹೆಸರಲ್ಲಿ  ಈಗ ರಾಜಕೀಯ ಚರ್ಚೆ ತೀವ್ರಗೊಂಡಿದೆ.

ಸಿಪಿಎಂಗೆ ಸಹಾಯವೊದಗಿ ಸಲು ಬಿಜೆಪಿ ಡಮ್ಮಿ ಅಭ್ಯರ್ಥಿಯ ನಾಮಪತ್ರ ಹಿಂತೆಗೆದಿಲ್ಲವೆಂದು  ಯುಡಿಎಫ್ ಆರೋಪಿಸುತ್ತಿದೆ. ಇದೇ ವೇಳೆ ಇಲ್ಲಿ ಯುಡಿಎಫ್ ಅಭ್ಯರ್ಥಿ ಯನ್ನು ಕಣಕ್ಕಿಳಿಸದಿರಲು  ಕಾರಣ ಸಿಪಿಎಂಗೆ ಅದು ಸಹಾಯವೊದಗಿ ಸಲಾಗಿದೆಯೆಂದು ಬಿಜೆಪಿ ಆರೋಪಿಸುತ್ತಿದೆ.

RELATED NEWS

You cannot copy contents of this page