ಕುಂಬಳೆ: 25 ವಾರ್ಡ್‌ಗಳಿರುವ ಕುಂಬಳೆ ಪಂಚಾಯತ್‌ನ ಚುನಾವಣೆಯಲ್ಲಿ 4 ವಾರ್ಡ್‌ಗಳಲ್ಲಿ ಸ್ಪರ್ಧೆ ಜಿದ್ದಾಜಿದ್ದಿನತ್ತ ಸಾಗಿದೆ. ಸಾಮಾನ್ಯವಾಗಿ ಪ್ರಮುಖ ಒಕ್ಕೂಟಗಳು ಹಾಗೂ ಪಕ್ಷಗಳ ಮಧ್ಯೆ ಸ್ಪರ್ಧೆ ನಡೆಯುವುದಾದರೂ ಕುಂಬಳೆಯ ನಾಲ್ಕು ವಾರ್ಡ್‌ಗಳಲ್ಲಿ ಎರಡರಲ್ಲಿ ಯುಡಿಎಫ್‌ನ ಪ್ರಧಾನ ಪಕ್ಷಗಳಾದ ಕಾಂಗ್ರೆಸ್ ಹಾಗೂ ಲೀಗ್ ಮಧ್ಯೆ ಹೋರಾಟ ನಡೆಯುತ್ತಿದೆ. ಒಂದು ವಾರ್ಡ್‌ನಲ್ಲಿ ಸಾಮಾನ್ಯವಾಗಿ ಸ್ಪರ್ಧಿಸಿ ಸೋಲುವ ಕಾಂಗ್ರೆಸ್ ಈ ಬಾರಿ ಸೋತ ಅಭ್ಯರ್ಥಿಯನ್ನು ಕೂಡಾ ನಿಲ್ಲಿಸದೆ ಸ್ಪರ್ಧೆಯಿಂದ ಹಿಂಜರಿದಿದೆ. ಆ ವಾರ್ಡ್‌ನಲ್ಲಿ ಯುಡಿಎಫ್‌ನ ಸಾನ್ನಿಧ್ಯವನ್ನು ತಿಳಿಸಲು ಲೀಗ್‌ಗೆ ಅಗತ್ಯವಿದ್ದರೆ ಅಭ್ಯರ್ಥಿಯನ್ನು ನಿಲ್ಲಿಸಬಹುದಾಗಿತ್ತು. ಆದರೆ ಅದಕ್ಕೆ ಸಿದ್ಧವಾಗದೆ ಅವರು ಕೂಡಾ ದೂರ ಉಳಿದಿದ್ದಾರೆ. ಲೀಗ್‌ನ ವಶದಲ್ಲಿರುವ ವಾರ್ಡ್ ಆದ ಕೊಡ್ಯಮ್ಮೆಯಲ್ಲಿ ಲೀಗ್‌ನ್ನು ಎದುರಿಸಲು ಪಕ್ಷದ ಕಾರ್ಯಕರ್ತ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಒಕ್ಕೂಟಗಳು, ಘಟಕ ಪಕ್ಷಗಳು ಸಾಕಷ್ಟು ಇದ್ದರೂ ಬಿಜೆಪಿ ಹಾಗೂ ಲೀಗ್ ಮಧ್ಯೆ ತೀವ್ರ ಹೋರಾಟ ಕಂಡು ಬರುತ್ತಿದೆ. ನಿರಂತರ ಸ್ಪರ್ಧಿಸಿ ಜಿಲ್ಲೆಯ ಉತ್ತರ ಭಾಗದ ಪಂಚಾಯತ್‌ಗಳಲ್ಲಿ ಕಾಂಗ್ರೆಸ್‌ನ ಸಾಮರ್ಥ್ಯ ಕುಸಿದಿದೆ. ಕಾಂಗ್ರೆಸ್ ಮುಖಂಡರು ಕೂಡಾ ಅದೇ ಅವಸ್ಥೆಯಲ್ಲಾಗಿದ್ದಾರೆಂದು ಮತದಾರರು ತಿಳಿಸುತ್ತಾರೆ. ಸಿಪಿಎಂನ ಅವಸ್ಥೆ ಕೂಡಾ ಸಾಮಾನ್ಯ ಇದೇ ರೀತಿಯಲ್ಲಿದ್ದು, ಬಿಜೆಪಿ ತನ್ನ ಶಕ್ತಿಯನ್ನು ಉಳಿಸಿ ಕೊಂಡಿದೆ ಎಂದು ಮತದಾರರು ಅಭಿಪ್ರಾಯಪಡುತ್ತಾರೆ.
ಇದೇ ವೇಳೆ ಎಸ್‌ಡಿಪಿಐ ಉತ್ಸಾಹದಿಂದ ರಂಗದಲ್ಲಿದೆ. ಈ ಬಾರಿ ವಿಚಿತ್ರವಾದ ಸ್ಪರ್ಧೆ ನಡೆಯುವ 21ನೇ ವಾರ್ಡ್ ಆದ ಶಾಂತಿಪಳ್ಳದಲ್ಲಿ ಪ್ರತೀ ಬಾರಿಯೂ ಸ್ಪರ್ಧಿಸಿ ಸೋಲುವ ಪರಂಪರೆಯಿದ್ದರೂ ಕಾಂಗ್ರೆಸ್ ಈ ಬಾರಿ ಅಭ್ಯರ್ಥಿಯನ್ನು ಇಲ್ಲಿ ನಿಲ್ಲಿಸಲಿಲ್ಲ. ಕಾಂಗ್ರೆಸ್‌ಗೆ ಬೇಡದಿದ್ದರೆ ನಮಗೂ ಬೇಡ ಎಂಬ ನಿಲುವನ್ನು ಘಟಕ ಪಕ್ಷವಾದ ಲೀಗ್ ಕೈಗೊಂಡ ಕಾರಣ ಆ ವಾರ್ಡ್‌ನಲ್ಲಿ ಐಕ್ಯರಂಗಕ್ಕೆ ಅಭ್ಯರ್ಥಿಯೇ ಇಲ್ಲದಾಯಿತು. ಇದೇ ವೇಳೆ ಬಿಜೆಪಿಯ ಡಮ್ಮಿ ಅಭ್ಯರ್ಥಿ ನಾಮಪತ್ರ ಹಿಂತೆಗೆಯದಿರುವುದು ಸಿಪಿಎಂಗೆ ಸಹಾಯ ಮಾಡಲೆಂದು ಕಾಂಗ್ರೆಸ್ ಆರೋಪಿಸುತ್ತಿದೆ.
ಕಳೆದ ಚುನಾವಣೆಯಲ್ಲಿ ಜಯ ಗಳಿಸಿದ ಸಿಪಿಎಂ ಸದಸ್ಯ ಸ್ಥಾಯೀ ಸಮಿತಿ ಅಧ್ಯಕ್ಷನಾಗಿರುವುದು ಬಿಜೆಪಿಯ ಮತ ಗಳಿಸಿ ಆಗಿತ್ತು ಎಂದು ಹೇಳಲಾಗುತ್ತಿದೆ. ಆ ಅಭ್ಯರ್ಥಿಯ ಪುತ್ರಿ ಈಗ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಕಾಂಗ್ರೆಸ್ ತಿಳಿಸಿದೆ. ಬಿಜೆಪಿಯ ಮತವನ್ನು ವಿಂಗಡಿಸಿ ಎಡರಂಗಕ್ಕೆ ಸಹಾಯ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಯುಡಿಎಫ್ ತಿಳಿಸುತ್ತಿದೆ.
ಇದೇ ವೇಳೆ ಮುಳಿಯಡ್ಕದಲ್ಲಿ ಯುಡಿಎಫ್‌ಗೆ ಇಬ್ಬರು ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ಗೆ ಜಯ ಸಾಧ್ಯತೆ ಇರುವ ಈ ವಾರ್ಡ್‌ನಲ್ಲಿ ಲೀಗ್‌ನ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಸಬೂರ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಎಡ- ಬಿಜೆಪಿ ಅಭ್ಯರ್ಥಿಗಳು ಇಲ್ಲಿದ್ದರೂ ಪ್ರಧಾನ ಸ್ಪರ್ಧೆ ಲೀಗ್- ಕಾಂಗ್ರೆಸ್‌ನ ಮಧ್ಯೆ ಆಗಿದೆ. ಈ ವಾರ್ಡ್‌ನ ಕಂಪನ 18ನೇ ವಾರ್ಡ್‌ನಲ್ಲೂ ಪ್ರಕಟಗೊಂಡಿದೆ. ಕಾಂಗ್ರೆಸ್ ಜಯ ಗಳಿಸುವ ಸೀಟ್ ಆಗಿರುವ ಬತ್ತೇರಿಯನ್ನು ವಿಭಜಿಸಿ ರೂಪೀಕರಿಸಿದ ರೈಲ್ವೇ ಸ್ಟೇಷನ್ ವಾರ್ಡ್‌ನ್ನು ಲೀಗ್ ಸ್ವಂತ ಮಾಡಿ ಅಲ್ಲಿ ಸ್ವಯಂ ಆಗಿ ಅಭ್ಯರ್ಥಿಯನ್ನು ಘೋಷಿಸಿದೆ. ಇದರ ವಿರುದ್ಧ ಕಾಂಗ್ರೆಸ್ ಮಂಡಲ ಕಾರ್ಯದರ್ಶಿ ಯ ಪತ್ನಿ ಈ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸ್ಪರ್ಧೆಯ ಈ ನೂತನ ರೀತಿ ಎಸ್‌ಡಿಪಿಐಗೆ ಜಯ ಸಾಧ್ಯತೆ ಹೆಚ್ಚಿಸುತ್ತಿದೆ ಎನ್ನಲಾಗಿದೆ. ಇದೇ ವೇಳೆ ಲೀಗ್‌ಗೆ ಅಡಿಪಾಯ ಭದ್ರವಾಗಿರುವ ಕೊಡ್ಯಮ್ಮೆಯಲ್ಲಿ ಎಡ- ಬಿಜೆಪಿ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿಸಿದ ಪ್ರಚಾರವಾಗಿದೆ ಲೀಗ್- ಲೀಗ್ ಸ್ವತಂತ್ರ ಅಭ್ಯರ್ಥಿಗಳ ಮಧ್ಯೆ ಕಂಡು ಬರುತ್ತಿರುವುದು. 25 ವಾರ್ಡ್‌ಗಳಲ್ಲಿ ಎಲ್ಲಿಯಾದರೂ ಒಂದು ಕಡೆ ಕಾಂಗ್ರೆಸ್ ಜಯಗಳಿಸಿದರೆ ಹಾಗೂ ಯುಡಿಎಫ್‌ಗೆ ಬಹುಮತ ಲಭಿಸಿದರೆ ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಇಲ್ಲಿ ತನ್ನ ಆಟವನ್ನು ಆಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬೆದರಿಕೆಯನ್ನು ಇಲ್ಲದಂತೆ ಮಾಡಲು ಹಲವು ವಾರ್ಡ್‌ಗಳಲ್ಲಿ ಘಟಕ ಪಕ್ಷಗಳು ಪರಸ್ಪರ ಸ್ಪರ್ಧಿಸುತ್ತಿರುವುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.






