ಕುಂಬಳೆ: ಬಸ್‌ಗಳ ಸಂಚಾರ ಸಮಯದ ಹೆಸರಲ್ಲಿ ನಿನ್ನೆ ಸಂಜೆ ಕುಂಬಳೆ ಬಸ್ ತಂಗುದಾಣ ಬಳಿ ಖಾಸಗಿ ಬಸ್ ಕಾರ್ಮಿಕರ ನಡುವೆ ಮಾರಾಮಾರಿ ನಡೆದು ಓರ್ವ ಚಾಲಕ ಗಾಯಗೊಂಡ ಘಟನೆ ನಡೆದಿದೆ.
ಕಾಸರಗೋಡು-ತಲಪ್ಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸೊಂದರ ಚಾಲಕ ನೀರ್ಚಾಲು ಕನ್ಯಪ್ಪಾಡಿಯ ಅಮೀರ್ ಎನ್ (30) ಎಂಬವರು ಈ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಅವರು ನೀಡಿದ ದೂರಿನಂತೆ ಇದೇ ರೂಟ್‌ನಲ್ಲಿ ಸಂಚರಿಸುವ ಎರಡು ಖಾಸಗಿ ಬಸ್‌ಗಳ ಕಾರ್ಮಿಕರಾದ ಸಹದ್, ನಿಶಾದ್, ಬಾದಿಶಾ ಹಾಗೂ ಅಮೀನ್ ಎಂಬವರ ವಿರುದ್ದ ಕುಂಬಳ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.
ಬಸ್ ಸಿಬ್ಬಂದಿಗಳ ಮಧ್ಯೆ ಪದೇ ಪದೇ ಘರ್ಷಣೆ: ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತೀವ್ರ ನಿಗಾ ಇರಿಸುವಂತೆ ಎಸ್‌ಪಿ ಕಠಿಣ ನಿರ್ದೇಶ
ಕುಂಬಳೆ: ಬಸ್ ಸಂಚಾರದ ಸಮಯದ ಹೆಸರಲ್ಲಿ ಖಾಸಗಿ ಬಸ್ ಕಾರ್ಮಿಕರ ನಡುವೆ ಪದೇ ಪದೇ ಘರ್ಷಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಂಬಳೆ, ಬದಿಯಡ್ಕ ಮತ್ತು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶಗಳ ಎಲ್ಲಾ ಖಾಸಗಿ ಬಸ್‌ಗಳ ಸೇವಾ ಸಮಯಾವಳಿಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಮೂರು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನಿರ್ದೇಶ ನೀಡಿದ್ದಾರೆ. ಇನ್ನು ಇಂತಹ ಘರ್ಷಣೆ ಉಂಟಾದಲ್ಲಿ ಬಿಗಿ ಕ್ರಮ ಕೈಗೊಳ್ಳುವಂತೆಯೂ ಅವರು ನಿರ್ದೇಶ ನೀಡಿದ್ದಾರೆ.






