ಉಪ್ಪಳ: ಮನೆ ಹಿತ್ತಿಲಲ್ಲಿರುವ ಬಾವಿಗೆ ಬಿದ್ದ ಕಾಡು ಹಂದಿಯನ್ನು ಅಗ್ನಿಶಾಮಕದಳ ಮೇಲಕ್ಕೆತ್ತಿ ಅದರ ಪ್ರಾಣ ಉಳಿಸಿದೆ. ಆದರೆ ಬಾವಿ ಯಿಂದ ಮೇಲಕ್ಕೆ ಬಂದ ತಕ್ಷಣ ಹಂದಿ ಓಡಿ ಪರಾರಿಯಾಗಿದೆ. ಬಂದ್ಯೋಡು ಬಳಿ ಶಿರಿಯಾ ಪೆಟ್ರೋಲ್ ಬಂಕ್ ಪರಿಸರದಲ್ಲಿ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿರುವ ಆವರಣ ರಹಿತ ಬಾವಿಗೆ ನಿನ್ನೆ ಕಾಡುಹಂದಿ ಬಿದ್ದಿತ್ತು. ಬಾವಿಯಿಂದ ಶಬ್ದ ಕೇಳಿ ಬಂದು ಮನೆಯವರು ನೋಡಿದಾಗ ಹಂದಿ ಪತ್ತೆಯಾಗಿತ್ತು. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಉಪ್ಪಳ ಅಗ್ನಿಶಾಮಕದಳದ ಫಯರ್ ಮೆನ್‌ಗಳಾದ ರಫೀಕ್, ಪಶುಪತಿ, ಅಭಿಜಿತ್, ಹೋಂಗಾರ್ಡ್ ಸುರೇಶ್, ಚಾಲಕ ಸುಫೈಲ್ ಎಂಬಿವರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಅವರು ತಮ್ಮ ಬಲೆಯನ್ನು ಬಾವಿಗಿಳಿಸಿ ಹಂದಿಯನ್ನು ಮೇಲಕ್ಕೆತ್ತಿದ್ದಾರೆ. ಅನಂತರ ಬಲೆ ಯಿಂದ ಹಂದಿಯನ್ನು ಹೊರ ತೆಗೆದ ತಕ್ಷಣ ಅದು ಓಡಿ ಪರಾರಿಯಾಗಿದೆ.






