ಕಾಸರಗೋಡು: ಶಾಸಕ ರಾಹುಲ್ ಮಾಂಕೂಟತ್ತಿಲ್ ವಿಷಯ ದಲ್ಲಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಟುವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ. ರಾಹುಲ್ ರನ್ನು ಬೆಂಬಲಿಸುವವರ ವಿರುದ್ಧವೂ ಅವರು ರೋಷ ವ್ಯಕ್ತಪಡಿಸಿದ್ದಾರೆ. ರಾಹುಲ್ ಮಾಂಕೂಟತ್ತಿಲ್ ಬೆತ್ತ ನೀಡಿ ಹೊಡೆಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಉತ್ತಮ ನಿರೀಕ್ಷೆಯಿರಿಸಿಕೊಂಡಿದ್ದ ಯುವ ನೇತಾರ ಪಕ್ಷಕ್ಕೆ ಸವಾಲೆಸೆ ದಿರುವುದು ಸರಿಯಲ್ಲವೆಂದು ಉಣ್ಣಿತ್ತಾನ್ ತಿಳಿಸಿದ್ದಾರೆ. ಇದೇ ವೇಳೆ ರಾಹುಲ್ ವಿರುದ್ಧ ಈ ಹಿಂದೆ ಶಿಸ್ತು ಕ್ರಮ ಕೈಗೊಂಡಿರುವುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ಕೆ. ಮುರಳೀಧರನ್ ತಿಳಿಸಿದಾರೆ. ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕೇ ಎಂಬ ಬಗ್ಗೆ ರಾಹುಲ್ ತೀರ್ಮಾನಿಸಬೇಕೆಂದೂ ಮುರಳೀಧರನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾನೂನು ಕಾನೂನಿನ ರೀತಿಯಲ್ಲೇ ಸಾಗಲಿ ಎಂದು ಮಾಜಿ ವಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ರಿಮಾಂಡ್‌ನಲ್ಲಿರುವ ಸಿಪಿಎಂ ನೇತಾರರ ವಿರುದ್ಧ ಆ ಪಕ್ಷ ಯಾವ ಕ್ರಮ ಕೈಗೊಂಡಿದೆಯೆಂದು ಅವರು ಪ್ರಶ್ನಿಸಿದ್ದಾರೆ.







