ಬೇಳ: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯ ಕ್ರಮ ಜರಗಿತು. ಡಾ. ವಾಣಿಶ್ರೀ ಪ್ರಸ್ತುತ ಪಡಿಸಿದರು. ವಿದ್ವಾಂಸ ನಾರಾಯಣ ಭಟ್ ರಚಿಸಿದ ಪದ್ಯಗಳಿಗೆ ಸಂಸ್ಥೆಯ ನವ್ಯಶ್ರೀ ಕುಲಾಲ್, ಶರಣ್ಯ ಶೆಟ್ಟಿ, ಯಶಿಕ ಸಂದೀಪ್, ದಿಯಾ ಸುಕೇಶ್ ನೃತ್ಯ ಮಾಡಿದರು. ನಾರಾಯಣ ಭಟ್‌ರ ಪುತ್ರ ಡಾ. ವೆಂಕಟ ಗಿರೀಶ್‌ರನ್ನು ಗೌರವಿಸಲಾಯಿತು. ಗೋಪಾಲಕೃಷ್ಣ, ವಿಶ್ವನಾಥ ಪುತ್ತಿಗೆ, ಮಧುಲತಾ ಪುತ್ತೂರು ಹಾಡಿದರು. ಇದೇ ವೇಳೆ ಮಧುಲತಾ ಪುತ್ತೂರಿ ಅವರಿಗೆ ಗಾನ ನಾಟ್ಯ ಶಾರದೆ, ನವ್ಯಶ್ರೀ ಕುಲಾಲ್ ರಿಗೆ,ದಿಯಾ ಸುರೇಶ್‌ರಿಗೆ ನಾಟ್ಯ ಕಲಾ ಶಾರದೆ ಪ್ರಶಸ್ತಿ ನೀಡಲಾ ಯಿತು. ಮೋಕ್ಷ, ಮುಕ್ತಿ ಅವರಿಂದ ಯೋಗ ನೃತ್ಯ ನಡೆಯಿತು. ಹಲವರು ಭಾಗವಹಿಸಿದರು.







