ಕಾಸರಗೋಡು: ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ್ರಾಯದ ಮತದಾರ ಪನತ್ತಡಿ ಪಂಚಾಯತ್ನಲ್ಲಿದ್ದಾರೆ. ಇಲ್ಲಿನ ೩ನೇ ವಾರ್ಡ್ ಕೋಯತ್ತಡ್ಕ ದಲ್ಲಿ ವಾಸಿಸುವ ಎಂಕಪ್ಪು ನಾಯ್ಕ್ (105) ಅತ್ಯಂತ ಹೆಚ್ಚು ಪ್ರಾಯದ ಜಿಲ್ಲೆಯ ಮತದಾರನಾಗಿದ್ದಾರೆ. ಇವರು ಕಳೆದ ಬಾರಿಯೂ ಮತದಾನ ಗೈದಿದ್ದರು. ಈಗ ಅಸ್ವಸ್ಥತೆಗಳು ಹೆಚ್ಚಿದ್ದರೂ ಮತದಾನ ಮಾಡುವ ಆವೇಶದಲ್ಲಿ ಯಾವುದೇ ಕುಂದು ಉಂಟಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲಿಯೇ ಇವರು ಮತದಾನ ದಾಖಲಿಸಿದ್ದರು. ಕಳೆದ ಚುನಾವಣೆ ವೇಳೆಯಲ್ಲಿ ಕಾಞಂಗಾಡ್ ಸಹಾಯಕ ಜಿಲ್ಲಾಧಿ ಕಾರಿ ಪ್ರತೀಕ್ ಜೈನ್ ಇವರ ಮನೆಗೆ ತೆರಳಿ ಅಭಿನಂದಿಸಿದ್ದರು.







