ಕಾಸರಗೋಡು: ರಾಜ್ಯ ಮಟ್ಟದಲ್ಲಿಯೇ 15 ದಿನದಲ್ಲಿ ಎಸ್‌ಐಆರ್ ಎನ್ಯುಮರೇಷನ್ ಫಾರ್ಮ್ ವಿತರಿಸಿ, ಭರ್ತಿಗೊಳಿಸಿ ಅದನ್ನು ಸ್ವೀಕರಿಸಿ ಅಪ್ಲೋಡ್ ಪೂರ್ತಿಗೊಳಿಸಿರುವುದರಲ್ಲಿ ಪ್ರಥಮ ಸ್ಥಾನ ಮಂಜೇಶ್ವರ ತಾಲೂಕಿನ 170ನೇ ನಂಬ್ರ ಬೂತ್ ಆದ ಅಂಗಡಿಮೊಗರುವಿನ ಬಿಎಲ್‌ಒ ವಿಖ್ಯಾತ್ ಬಿ. ರೈಗೆ ಆಗಿದೆ. ಜಿಲ್ಲೆ ಯಲ್ಲಿ ಮತದಾರರ ಯಾದಿ ಪರಿಷ್ಕರಿ ಸುವ ಕೆಲಸ ಒಂದು ವಾರ್ಡ್‌ನಲ್ಲಿ ಮೊದಲು ಪೂರ್ತಿಯಾಗಿರುವುದು ಅಂಗಡಿಮೊಗರು ವಾರ್ಡ್‌ನಲ್ಲಾಗಿದೆ.
ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ಕಾರ್ಯವನ್ನು ಪ್ರಾಮಾಣಿಕವಾಗಿ ಹಾಗೂ ಕರ್ತವ್ಯನಿಷ್ಠೆಯಿಂದ ನಡೆಸಿದ ಅಂಗಡಿಮೊಗರು ವಾರ್ಡ್ ಬಿಎಲ್‌ಒ ವಿಖ್ಯಾತ್ ರೈಯನ್ನು ಅಭಿನಂದಿಸಿದ್ದಾರೆ. ಶಾಸಕ ಎಕೆಎಂ ಅಶ್ರಫ್ ಕೂಡಾ ಬಿಎಲ್‌ಒರನ್ನು ಅಭಿನಂದಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ೨೪ರ ಹರೆಯದ ವಿಖ್ಯಾತ್‌ಗೆ ಕಾಸರಗೋಡು ಅಣಂಗೂರು ಜಿಎಲ್‌ಪಿ ಶಾಲೆಯಲ್ಲಿ ಅಧ್ಯಾಪಕನಾಗಿ ಸರಕಾರಿ ನೇಮಕಾತಿ ಲಭಿಸಿತ್ತು. ಅದರ ಬಳಿಕ ಅಂಗಡಿ ಮೊಗರು 170ನೇ ಬೂತ್ ಬಿಎಲ್‌ಒ ಹೊಣೆಯೂ ಇವರಿಗೆ ಲಭಿಸಿತ್ತು. ಈ ತಿಂಗಳ ೫ರಂದು ಮಲಯಾಳದಲ್ಲಿರುವ 5೦೦ ಫಾರ್ಮ್‌ಗಳನ್ನು, 7ರಂದು 1135 ಫಾರ್ಮ್‌ಗಳನ್ನು ಅಧಿಕಾರಿಗಳು ವಿಖ್ಯಾತ್‌ಗೆ ನೀಡಿದ್ದರು. ೮ರಂದು ಎನ್ಯುಮರೇಶನ್ ಆರಂಭಿಸಬೇಕೆಂದು ವಿಲ್ಲೇಜ್ ಆಫೀಸ್‌ನಿಂದ ಕರೆಯೂ ಬಂತು. ಆದರೆ ೭ರಂದು ಸಾಧ್ಯವಿಲ್ಲ ವೆಂದು ಸಹೋದ್ಯೋಗಿಗಳ ಸಹಿತ ತಮಿಳುನಾಡಿಗೆ ಪ್ರಯಾಣ ಹೋಗಲು ತೀರ್ಮಾನಿಸಿರುವು ದಾಗಿಯೂ ತಹಶೀಲ್ದಾರರಿಗೆ ಅವರು ತಿಳಿಸಿದರು. ಅವರ ಅನುಮತಿಯೊಂದಿಗೆ ಮೂರು ದಿನದ ಪ್ರಯಾಣ ಕಳೆದು 10ರಂದು ಹಿಂತಿರುಗಿ ಬಂದು ಅಂದೇ ಎನ್ಯುಮರೇಶನ್ ಚಟುವಟಿಕೆಯನ್ನು ಆರಂಭಿಸಿದ್ದರು. ಆರಂಭದಲ್ಲಿ ವಾರ್ಡ್‌ನ ಮತದಾರರ ಹೆಸರು ಒಂದು ಪುಸ್ತಕದಲ್ಲಿ ಕ್ರಮಸಂಖ್ಯೆಯ ಆಧಾರದಲ್ಲಿ ಬರೆದರು. ಅದರಲ್ಲಿ ಫಾರ್ಮ್ ಪಡೆದವರ ಹಾಗೂ ಪಡೆಯದವರ ಮಾಹಿತಿಯನ್ನು ದಾಖಲಿಸಿದರು. ಪ್ರತೀ ದಿನ ಅದಕ್ಕಾಗಿ ಮಾಡಿದ ಕೆಲಸಗಳ ಬಗ್ಗೆ ದಾಖಲಿಸುವ ರೀತಿಯಲ್ಲಿ ಚಾರ್ಟ್ ಸಿದ್ಧಪಡಿಸಿದರು. ಬಳಿಕ ಅದನ್ನು ಭರ್ತಿಗೊಳಿಸಿ ಹಿಂಪಡೆಯುವ ದಿನ ಸಹಿತ ಎಲ್ಲಾ ವ್ಯವಸ್ಥೆಗಳನ್ನೂ ಸಿದ್ಧಪಡಿಸಿಕೊಂಡರು. ಕೊನೆಗೆ ಅದನ್ನು ಅಪ್ಲೋಡ್ ಮಾಡಲಾರಂಭಿಸಿದರು. ನ. 26ರಂದು ಬೆಳಿಗ್ಗೆ ಎಲ್ಲಾ ಕೆಲಸ ಗಳನ್ನೂ ಈ ರೀತಿ ಪೂರ್ತಿಗೊಳಿಸಿದರು. ಆ ಕ್ಷಣದಲ್ಲೇ ಇವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಮಾಹಿತಿ ತಿಳಿದು ಹಿರಿಯ ಬಿಎಲ್‌ಒಗಳು ಇದು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿರುವುದಾಗಿ ವಿಖ್ಯಾತ್ ತಿಳಿಸಿದ್ದಾರೆ. ಯಾವುದೇ ಕೆಲಸವಾಗಿದ್ದರೂ ಪ್ರಾಮಾಣಿಕತೆ ಯಿಂದ ಸಮರ್ಪಣಾ ಭಾವದೊಂ ದಿಗೆ ಮಾಡಿದರೆ ಅದು ದೊಡ್ಡ ಕೆಲಸ ವಾಗಿ ಕಂಡು ಬರುವುದಿಲ್ಲವೆಂದು ವಿಖ್ಯಾತ್ ಅಭಿಪ್ರಾಯಪಟ್ಟಿದ್ದಾರೆ.
285 ಮನೆಗಳು ಅಂಗಡಿ ಮೊಗರು ವಾರ್ಡ್‌ನಲ್ಲಿದೆ. ಈ ಮನೆಗಳಿಗೆ ಎರಡು ದಿನದೊಳಗೆ ನೇರವಾಗಿ ಫಾರ್ಮ್ ವಿತರಿಸಿದರು. ಕನ್ನಡ ವಲಯವಾದ ಕಾರಣ ಫಾರ್ಮ್‌ಗಳು ಮಲಯಾಳದಲ್ಲಿದ್ದ ಹಿನ್ನೆಲೆಯಲ್ಲಿ ಪ್ರತೀ ಫಾರ್ಮ್ ನಲ್ಲೂ ಮಲೆಯಾಳದ ಮೇಲೆ ಕನ್ನಡದಲ್ಲಿ ಬರೆದು ನೀಡಿದರು. ಮಾತ್ರವಲ್ಲ ಫಾರ್ಮ್ ಭರ್ತಿಗೊಳಿಸ ಬೇಕಾದ 2002ರ ವೋಟರ್ಸ್ ಲಿಸ್ಟ್‌ನ ಮಾಹಿತಿಗಳನ್ನು ಇವರೇ ಎಲ್ಲಾ ಫಾರ್ಮ್‌ಗಳಲ್ಲೂ ಬರೆದು ನೀಡಿದರು. ಇದು ಫಾರ್ಮ್ ಭರ್ತಿಗೊಳಿಸುವುದಕ್ಕೆ ಮನೆಯವರಿಗೆ ಸಹಾಯಕ ವಾಯಿತು. ಉಳಿದ ಮನೆಗಳಲ್ಲಿ ಮೂರನೇ ದಿನ ಇದೇ ರೀತಿ ಫಾರ್ಮ್ ವಿತರಿಸಿದರು. ವಾರ್ಡ್‌ನ ಒಂದು ಕಡೆ ಸಂಚಾರಕ್ಕೆ ಸೂಕ್ತವಲ್ಲದ ಹಾದಿ ಇರುವವರಿಗಾಗಿ ಶಿಬಿರವನ್ನು ಆಯೋಜಿಸಿದರು. ಇವರಿಗೆ ಮಾಹಿತಿ ತಿಳಿಸಿದರು. ಜೊತೆಗೆ ಸಂಘ ಸಂಸ್ಥೆಗಳ, ರಾಜಕೀಯ ಕಾರ್ಯಕರ್ತರ ಸಹಾಯವೂ ಇವರಿಗೆ ಲಭಿಸಿತು. ಈ ಮಧ್ಯೆ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಉಂಟಾದ ಸಮಸ್ಯೆಯಿಂದ ಭರ್ತಿಗೊಳಿ ಸಿದ ಫಾರ್ಮ್‌ಗಳನ್ನು ಅಪ್ಲೋಡ್ ಮಾಡುವುದರಲ್ಲಿ ಅಲ್ಪ ತೊಂದರೆ ಉಂಟಾಯಿತು. ವೋಟರ್ಸ್ ಲಿಸ್ಟ್ ಪರಿಷ್ಕರಣೆ ಬಗ್ಗೆ ಸ್ಪಷ್ಟವಾದ ಮಾರ್ಗ ನಿರ್ದೇಶಗಳನ್ನು ಅಧಿಕಾರಿಗಳಿಗೆ ನೀಡಲು ಸಾಧ್ಯವಾಗಿದ್ದರೆ ಸರಿಯಾದ ಸಮಯದಲ್ಲಿಯೇ ಎಲ್ಲಾ ಬಿಎಲ್‌ಒ ಗಳಿಗೂ ನಿಶ್ಚಿತ ಸಮಯಕ್ಕೆ ಮುಂಚಿತ ವಾಗಿಯೇ ಫಾರ್ಮ್ ಭರ್ತಿಗೊಳಿಸಿ ನೀಡಲು ಸಾಧ್ಯವಾಗಬಹುದಾಗಿತ್ತೆಂದು ವಿಖ್ಯಾತ್ ರೈ ಅಭಿಪ್ರಾಯಪಟ್ಟಿದ್ದಾರೆ.







