ರೈಲು ಹಳಿಯಲ್ಲಿ ಕಲ್ಲು ಇರಿಸಿದ ಮೂವರು ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ಮಂಜೇಶ್ವರ: ಉಪ್ಪಳ ಐಲ ಬೀಚ್ ರಸ್ತೆಯ ರೈಲು ಹಳಿಯಲ್ಲಿ ಕಲ್ಲು ಇರಿಸಿದ್ದ ಮೂವರು ವಿದ್ಯಾರ್ಥಿ ಗಳನ್ನು ಮಂಜೇ ಶ್ವರ ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. ಉಪ್ಪಳ ನಿವಾಸಿಗಳಾದ 10, ಪ್ಲಸ್‌ವನ್, ಪ್ಲಸ್‌ಟು ವಿದ್ಯಾರ್ಥಿಗಳನ್ನು ಪೊಲೀಸರು ಈ ರೀತಿ ವಶಕ್ಕೆ ತೆಗೆದು ಕೊಂಡು ನಂತರ ಅವರ ಹೆತ್ತವರನ್ನು ಠಾಣೆಗೆ ಕರೆಸಿ ಮುನ್ನೆಚ್ಚರಿಕೆ ನೀಡಿ ಹೆತ್ತವರ ಜೊತೆ ಹೋಗಲು ಅನುಮತಿ ನೀಡಿದರು.

ನಿನ್ನೆ ಮಧ್ಯಾಹ್ನ 1.30ಕ್ಕೆ ದಾದರ್-ತಿರುನಲ್ವೇಲಿ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದ ವೇಳೆ ಐಲ ಬೀಚ್‌ನ ರೈಲು ಹಳಿಯಲ್ಲಿ ಕಲ್ಲು ಇರಿಸಲಾಗಿತ್ತು. ಅದನ್ನು ಕಂಡವರು ಆ ಬಗ್ಗೆ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ  ಮೂವರು ವಿದ್ಯಾರ್ಥಿಗಳನ್ನು ಗುರುತಿಸಿ ವಶಕ್ಕೆ ತೆಗೆದುಕೊಂಡಿದ್ದರು.

RELATED NEWS

You cannot copy contents of this page