ಅಸೌಖ್ಯ: ಬಾಲಕ ದುಬಾಯಿಯಲ್ಲಿ  ನಿಧನ

ಕಾಸರಗೋಡು: ಅಸೌಖ್ಯ ನಿಮಿತ್ತ ಕಾಸರಗೋಡಿನ ಬಾಲಕ ದುಬಾಯಿಯಲ್ಲಿ ಚಿಕಿತ್ಸೆ ಮಧ್ಯೆ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ಚೌಕಿಯ ಖಲಂದರ್ ಸಂಶೀರ್-ರೈಹಾನ ದಂಪತಿ ಪುತ್ರ ಫಸಾ ಸುಲ್ತಾನ್ (6) ಸಾವನ್ನಪ್ಪಿದ ಬಾಲಕ. ಅಸೌಖ್ಯ ನಿಮಿತ್ತ ಈತನನ್ನು ದುಬಾಯಿಯ ಖಿಸೈಸಿ  ಆಸ್ಪತ್ರೆಯಲ್ಲಿ ದಾಖಲಿಸಿದ್ದು ಫಲಕಾರಿಯಾಗಲಿಲ್ಲ.

ಮೃತ ಬಾಲಕ ಹೆತ್ತವರ ಹೊರತಾಗಿ ಸಹೋದರ-ಸಹೋದರಿಯರಾದ ಫಾಸ್, ಫಾತಿಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾನೆ. ಮೃತದೇಹವನ್ನು ದುಬಾಯಿಯಲ್ಲೇ ದಫನಗೈಯ್ಯಲಾಯಿತು.

RELATED NEWS

You cannot copy contents of this page